Uncategorized

ಹುಬ್ಬಳ್ಳಿಯಲ್ಲಿ ನಡೆದ ಅಹಿಂಸಾ ರನ್ ಗಿನ್ನಿಸ್ ದಾಖಲೆ.ಚಂಚಲ್ ಜೈನ್

ಜೈನ್ ಇಂಟರ್ ನ್ಯಾಶನಲ್ ಟ್ರೇಡ್ ಆರ್ಗನೈಜೇಶನ್ ವತಿಯಿಂದ ಜಗತ್ತಿನಾದ್ಯಂತ ಶಾಂತಿಯ ಸಂಕೇತವಾಗಿ ಇಂದು ಆಯೋಜಿಸಲಾಗಿದ್ದ ಮ್ಯಾರಥಾನ್ ಗೆ ಹುಬ್ಬಳ್ಳಿಯಲ್ಲೂ ಚಾಲನೆ ನೀಡಲಾಯಿತು.

ಜೈನ್ ಇಂಟರ್ ನ್ಯಾಶನಲ್ ಟ್ರೇಡ್ ಆರ್ಗನೈಜೇಶನ್ ನ ಚೇರ್ಮನ್ ಪ್ರಕಾಶ ಕೋಠಾರಿ, ನಿವೃತ್ತ ಪೊಲೀಸ್ ಅಧಿಕಾರಿ ಎ.ಆರ್.ಬಡಿಗೇರ್, ಜಿತೇಂದ್ರ ಮಜೇಥಿಯಾ ಸೇರಿದಂತೆ ಹಲವು ಗಣ್ಯರು ಈ‌ಮ್ಯಾರಥಾನ್ ಗೆ ಚಾಲನೆ ನೀಡಿದರು.‌

ನಗರದ ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್ ನಿಂದ ಆರಂಭವಾದ ಶಾಂತಿಯ ಸಂಕೇತವಾದ ಈ ಅಹಿಂಸಾ ಓಟದಲ್ಲಿ ನಗರದ 1200 ಕ್ಕೂ ಅಧಿಕ ಜನ 3 ಕಿ.ಮಿ, 5 ಕಿ.ಮೀ, ಹಾಗೂ 10 ಕಿ.ಮೀ ಓಟದಲ್ಲಿ ಭಾಗವಹಿಸಿ ಶಾಂತಿ ಹಾಗೂ ಅಹಿಂಸೆಯ ಸಂದೇಶ ಸಾರಿದರು.

ಇನ್ನು ಪ್ರಮುಖವಾಗಿ 22 ದೇಶಗಳಲ್ಲಿ ಹಾಗೂ ಭಾರತದ 65 ನಗರಗಳಲ್ಲಿ ಏಕಕಾಲಕ್ಕೆ ಈ ಶಾಂತಿಯ ಸಂಕೇತ ಮ್ಯಾರಥಾನ್ ಆಯೋಜನೆ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು ಪುರುಷರು ಹಾಗೂ ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಈ ಮ್ಯಾರಥಾನ್ ನಲ್ಲಿ ಭಾಗವಿಸಿದ್ದು ವಿಶೇಷವಾಗಿತ್ತು.

ಇನ್ನು ಈ ಮ್ಯಾರಥಾನ್ ಗೆ ಗರಿಷ್ಠ ಮಟ್ಟದಲ್ಲಿ ಸಾಕಷ್ಟು ಜನ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿ‌ ಭಾಗಿಯಾದ ಹಿನ್ನೆಲೆ ಈ ಅಹಿಂಸಾ‌ ರನ್ ಗಿನ್ನೆಸ್ ದಾಖಲೆಯ ಪುಟ ಸೇರಿರುವುದು ವಿಶೇಷ.

Leave a Reply

Your email address will not be published. Required fields are marked *

error: Content is protected !!