ಬಿಜೆಪಿ ಪಾಲಿಕೆ ಸದಸ್ಯನ ಮಗನಿಂದ ಯುವಕನ ಮೇಲೆ ಇಟ್ಟಿಗೆಯಿಂದ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಪಾಲಿಕೆ ಸದಸ್ಯ ಮಗನಿಂದ ಹಲ್ಲೆ .ಸುಖಾ ಸುಮ್ಮನೆ ನಿಂತಿದ್ದ ಅಕ್ಷಯ ಕಳ್ಳೊಳಿ ಮೇಲೆ ಇಬ್ಬರು ಇಟ್ಟಿಗೆಯಿಂದಾ ಹೊಟ್ಟೆಗೆ ಹಾಗು ತಲೆಗೆ ಹೊಡೆದು ಪರಾರಿ ಆದ ಘಟನೆ ಗೋಪ್ಪನಕೊಪ್ಪದಲ್ಲಿ ನಡೆದಿದೆ .
ಗೋಪನಕೊಪ್ಪದ ಸಿದ್ದರಾಮ ನಗರದಲ್ಲಿ ರಾತ್ರಿ ತನ್ನ ಗೆಳೆಯರ ಜೊತೆ ನಿಂತಿದ್ದ ಅಕ್ಷಯ ಜೊತೆಗೆ ಶ್ರೀಧರ್ ನರಗುಂದ ಹಾಗೂ ಮಂಜುನಾಥ ಮುಳಗುಂದ ಏಕಾ ಏಕಿ ಜಗಳ ತೆಗೆದು ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.ಇನ್ನು ಹಲ್ಲೆಗೆ ಒಳಗಾದ ಅಕ್ಷಯನನ್ನು ಚಿಕಿತ್ಸೆಗಾಗಿ ಕಿಂಸ್ಸಗೆ ದಾಖಲಿಸಲಾಗಿದೆ.