Uncategorized

ಗಾಂಜಾ ಘಾಟು ಬೇಧಿಸಿದ ಉಪನಗರ ಪೊಲೀಸರು. ಇನ್ಸ್ಪೆಕ್ಟರ್ ಹೂಗಾರ ನೇತೃತ್ವದಲ್ಲಿ ನಡೆಯಿತು ಭರ್ಜರಿ ಕಾರ್ಯಾಚರಣೆ

ಗಾಂಜಾ ಮಾರಾಟ ಮಾಡುತ್ತಿದ್ದ ಹಾಗು ಖರೀದಿ ಮಾಡುತ್ತಿದ್ದ,ವ್ಯಸನಿಗಳಾಗಿದ್ದ ಜನರನ್ನು ಬಂಧಿಸಿ. ಗಾಂಜಾ ಘಾಟನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬೇಧಿಸಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸರು ಮುಂದುವರೆದು ಗಾಂಜಾ ಮುಕ್ತ ಅವಳಿ ನಗರ  ಮಾಡುವುದಕ್ಕೆ ಪಣತೊಟ್ಟಿದ್ದು ಮತ್ತೆ ಆರು ಜನರನ್ನು ಬಂಧಿಸಿ.1630 ಗ್ರಾಂ ಗಾಂಜಾ ಒಂದು ಎಲೆಕ್ಟ್ರಿಕ್ ಬೈಕ್ ಹಾಗೂ 7 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಮಾರುತಿ ಸಬರದ.ಗಣಪತಸಾ ಅಥಣಿ ಕಮರಿಪೇಟ ನಿವಾಸಿ.ಚಂದ್ರಪ್ಪ ಕಮ್ಮಾರ. ಗಣೇಶ ಯಾದವ.ರಮೇಶ್ ಮಾದರ.ನಿತಿನ್ ಮೇದಾರ್ ಹೀಗೆ ಒಟ್ಟು 3 ಜನ ಗಾಂಜಾ ಮಾರಾಟಗಾರರನ್ನು, 3 ಜನ ಗಾಂಜಾ ಖರೀದಿದಾರರನ್ನು, 02 ಜನ ಗಾಂಜಾ ವ್ಯಸನಿಗಳು ಸೇರಿ ಒಟ್ಟು 8 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು 1630 ಗ್ರಾಂ ತೂಕದ ಗಾಂಜಾ, ಒಂದು ಎಲೆಕ್ಟ್ರಿಕ್ ಬೈಕ್, 7 ಮೊಬೈಲ್ ಪೋನಗಳು ಹಾಗೂ 2300/- ರೂ ನಗದು ಹಣ ಜಪ್ತ ಮಾಡಿದ್ದು. ಒಟ್ಟು 2,50,000/- ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.


ಶಿವಪ್ರಕಾಶ ನಾಯ್ಕ ಎ.ಸಿ.ಪಿ ಉತ್ತರ ಉಪವಿಭಾಗ ಹುಬ್ಬಳ್ಳಿ ಇವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಎಮ್. ಎಸ್. ಹೂಗಾರ ಇವರ ನೇತೃತ್ವದಲ್ಲಿ ಠಾಣೆಯ ಪಿ.ಎಸ್.ಐ ದೇವೆಂದ್ರ ವೈ. ಮಾವಿನಂಡಿ, ಪಿ.ಎಸ್.ಐ ಎಮ್.ಬಿ.ಹೊಸುರ, ಮತ್ತು ಸಿಬ್ಬಂದಿ ಜನರಾದ ಶ್ರೀನಿವಾಸ ವಿ ಯರಗುಪ್ಪಿ, ಎಮ್.ಹೆಚ್.ಹಾಲನವರ, ಡಿ.ಆರ್ ಪಮಾರ, ಪ್ರಕಾಶ ಕಲಗುಡಿ, ತರುಣ ಗಡ್ಡದವರ, ರೇಣಪ್ಪ ಶಿಕ್ಕಲಗಾರ, ಮಾಲತೇಶ ಪಾಟೀಲ ಇ ಒಂದು ದಾಳಿಯಲ್ಲಿ ಭಾಗಿಯಾಗಿದ್ದು.ಇನ್ನು ಪೊಲೀಸ ಆಯುಕ್ತರಾದ ಶಶಿಕುಮಾರ ರವರು ಪೊಲೀಸರ ಈ ಕಾರ್ಯವನ್ನು ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!