Uncategorized

ರೌಡಿ ಶೀಟರಗಳಿಗೆ ನಡುಕ ಹುಟ್ಟಿಸಿದ ಕಸಬಾ ಠಾಣೆಯ ಪೊಲೀಸರು. ಇನ್ಸಪೆಕ್ಟರ ರಾಘವೇಂದ್ರ ಹಳ್ಳೂರ ಟೀಮ್ ಗೆ  ಸಾರ್ವಜನಿಕರಿಂದ ಪ್ರಶಂಸೆ

ಹುಬ್ಬಳ್ಳಿಯಲ್ಲಿ ರವಿವಾರ ನಡೆದ ರೌಡಿ ಶೀಟರ್ ಗಳ ನಡುವೆ ನಡೆದ ಗ್ಯಾಂಗ್ ವಾರ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸುವ ಮೂಲಕ ಬಂಧಿಸಿದ್ದಾರೆ.

ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ತಡರಾತ್ರಿ ರೌಡಿ ಶೀಟರ್ ಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು ಆ ಘಟನೆಯಲ್ಲಿ ಜಾವೂರ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಕೂಡಲೆ ಆತನನ್ನು ಸ್ಥಳೀಯರು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ .

ಇನ್ನು ಪ್ರಕರಣ ದಾಖಲಿಸಿಕೊಂಡ ಕಸಬಾಪೇಟ ಠಾಣೆಯ ಪೊಲೀಸರು ತನಿಖೆ ಕೈಗೊಂಡು ಪರಿಶೀಲಿಸಿದಾಗ ರೌಡಿ ಶೀಟರ್ ಅಪ್ತಾಬ್ ಕರಡಿಗುಡ್ಡ ಎಂಬಾತನ ಕೈವಾಡ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ಆತ ಪೊಲೀಸರಿಂದ ತಪ್ಪಿಸಿಕೊಂಡು ಬುಡರಸಿಂಗಿ ರಸ್ತೆಯಲ್ಲಿ ಹೋಗುವಾಗ .ಆತನನ್ನು ಬಂಧಿಸಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಅವರ ಮೇಲೇನೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಪಿಎಸ್ಐ ವಿಶ್ವನಾಥ್ ಆಲಮಟ್ಟಿ ಅವರು ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಅಪ್ತಾಬ್ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಆಪ್ತಾಬ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಪಿಎಸ್ಐ ವಿಶ್ವನಾಥ್ ಆಲಮಟ್ಟಿ ಪೊಲೀಸ್ ಸಿಬ್ಬಂದಿ ಆರ್ ರಾಮಾಪುರ ಹಾಗೂ ಪಾಲಯ್ಯ ಎಂಬವರಿಗೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು . ಇನ್ನು ಗುಂಡೆಟು ತಿಂದ  ರೌಡಿ ಶೀಟರ್ ಮೇಲೆ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಪ್ರಕರಣಗಳು ದಾಖಲಾಗಿದೆಯಂತೆ.

ರೌಡಿ ಶೀಟರ್ ಗಳ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಬಾಗಿ ಆಗಿರುವ ಅಪರಾದಿಗಳಲ್ಲಿ ಪೋಲಿಸ್ ಕಮಿಷನರೇಟ್ ನಿಂದ ಭಯದ ವಾತಾವರಣ ಸೃಷ್ಟಿಯಾಗಿದೆ, ಇದೆ ರೀತಿ ಕಾರ್ಯಾಚರಣೆಗಳು ಮುಂದುವರಿದರೆ ಅವಳಿನಗರದ ಕ್ರೈಂ ರೇಟ್ ಕಂಟ್ರೋಲ್ ಮಾಡುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣ ಯಶಸ್ವಿಯಾಗಲಿದೆ ಅಂತಾ ಸಾರ್ವಜನಿಕರ ಆಶಯವಾಗಿದೆ.

Leave a Reply

Your email address will not be published. Required fields are marked *

error: Content is protected !!