ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗು ಹತ್ಯೆ ಖಂಡಿಸಿದ. ಸಂಗೊಳ್ಳಿ ರಾಯಣ್ಣ ಬಳಗ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ ಅವರು
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ವೈದ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು .ಇನ್ನು ತಮ್ಮ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗವು ಅತ್ಯಾಚಾರ ಹತ್ಯೆಯನ್ನು ಖಂಡಿಸಿದ್ದಾರೆ .

ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಟ್ರೈನಿ ವೈದ್ಯೆಯ ಅಮಾನುಷ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸದ್ಯ ಉಗ್ರ ಸ್ವರೂಪ ಪಡೆದುಕೊಂಡಿದೆ.
ನಮ್ಮ ದೇಶದಲ್ಲಿ ಎಷ್ಟೇ ಕಾನೂನು ಕ್ರಮಗಳಿದ್ದರೂ ಇಂಥಹ ಅಮಾನುಷ ಕೃತ್ಯಗಳು ಇನ್ನೂ ನಿಂತಿಲ್ಲ ಎಂದರು.
ಇನ್ನು ಇದಕ್ಕೆ ಕಾನೂನಿನ ಅರಿವು , ಸ್ವಯಂಪ್ರೇರಣೆಯ ಕೊರತೆ, ಅನಾಗರಿಕತೆ , ಶಿಕ್ಷಣದಿಂದ ವಂಚಿತರಾಗಿದ್ದೆ ಕಾರಣ ಎಂದು ಬಲವಾಗಿ ನಂಬುತ್ತೇನೆ ಎಂದು ತಿಳಿಸಿದರು .
ಇನ್ನು ಎಲ್ಲರು ಬನ್ನಿ ಇಂಥಹ ಅಮಾನವೀಯ ಕೃತ್ಯಗಳನ್ನು ಒಕ್ಕೊರಲಾಗಿ ಖಂಡಿಸೋಣ. ಎಂದು ಸಾರ್ವಜನಿಕರಿಗೆ ಕರೆ ಕೊಟ್ಟಿದ್ದಾರೆ