ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಯುವಕನ ಹತ್ಯೆ

ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ವ್ಯಕ್ತಿ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಸ್ಲಂ ಮಖಾಂದಾರ್ (30) ಎಂಬಾತನೆ ಕೊಲೆಗಿಡಾದ ವ್ಯಕ್ತಿ.

ಬೆಂಗೇರಿ ಹತ್ತಿರ ಇರುವ ವೆಂಕಟೇಶ್ವರ್ ನಗರದಲ್ಲಿ ಗಾಯತ್ರಿ ಗುಡಿ ಹತ್ತಿರ ಮಂಜುನಾಥ್ ಎಂಬಾತನೆ ಕ್ಷುಲ್ಲಕ ಕಾರಣಕ್ಕೆ ಅಸ್ಲಂ ಎದೆ ಬಾಗಕ್ಕೆ ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ ಇನ್ನು ರಕ್ತದ ಮಡಿಲಲ್ಲಿ ಬಿದ್ದ ಅಸ್ಲಂನನ್ನು ಕೂಡಲೇ ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿಸ್ತೆ ಫಲಿಸದೆ ಅಸ್ಲಂ ಕೊನೆಯುಸಿರೆಳೆದಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆ ಕೇಶ್ವಪೂರ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಬಿಸಿದ್ದಾರೆ

ಕಿಮ್ಸ್ ಆಸ್ಪತ್ರೆಗೆ ಎಸಿಪಿ ಬಾಳಪ್ಪ , ಕೇಶ್ವಪೂರ್ ಠಾಣೆ ಪಿಐ ಸಾತೆನಲ್ಲಿ, ಪಿ ಎಸ್ ಐ , ಸದಾಶಿವ ಕನಟ್ಟಿ, ವಿದ್ಯಾನಗರ ಠಾಣೆಯ ಪಿ ಎಸ್ ಐ ಶ್ರೀಮಂತ ಅವರು ಬೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.