ಜೀವನದಲ್ಲಿ ಜಿಗುಪ್ಸೆಗೊಂಡು ಒಂದೇ ದಿನದಲ್ಲಿ ನೇಣಿಗೆ ಶರಣಾದ ಇಬ್ಬರು ವ್ಯಕ್ತಿಗಳು

ಸರಾಯಿ ಕುಡಿತದ ಚಟದಿಂದ ವ್ಯೆಕ್ತಿಯೊಬ್ಬರು ತಮ್ಮ ಹೊಸ ಮನೆಯಲ್ಲಿ ರಾತ್ರಿವೇಳೆ ವೇಲದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಳ ಗ್ರಾಮದಲ್ಲಿ ನಡೆದಿದೆ .೫೦ ವರ್ಷದ ಈರಪ್ಪಾ ಬಡಿಗೇರ ಎಂಬ ವ್ಯೆಕ್ತಿ ವೃತ್ತಿಯಲ್ಲಿ ಬಡಿಗೆ ಕೆಲಸಾ ಮಾಡುತ್ತಿದ್ದು .ಇನ್ನು ತಮ್ಮ ಜಮೀನಲ್ಲಿ ಹೊಸ ಮನೆ ಕಟ್ಟುತ್ತಿದ್ದು ದಿನಾಲು ರಾತ್ರಿ ಅಲ್ಲೆ ಮಲಗುತ್ತಿದ್ದು ಆದ್ರೆ ನಿನ್ನೆ ದಿನಾ ವಿಪರಿತ ಮಧ್ಯ ಕುಡಿತದಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾನೆ.

ಇನ್ನು ಮತ್ತೊಂದು ಪ್ರಕರಣ ನೂಲ್ವಿ ಗ್ರಾಮದ ಕುಮಾರಸ್ವಾಮಿ ಓಣಿಯಲ್ಲಿ ವ್ಯೆಕ್ತಿಯೊಬ್ಬ ವಿಪರೀತ ತೆಲೆ ನೋವು ಹಿನ್ನಲೆ ವೈದ್ಯರಿಗೆ ತೋರಿಸಿದರು ಎಷ್ಟು ಚಿಕಿತ್ಸೆ ತೆಗೆದುಕೊಂಡರು ಸಹ ತೇಲೆ ನೋವು ಕಡಿಮೆ ಆಗದೆ ಜೀವನದಲ್ಲಿ ಜಿಗುಪ್ಸೆಗೊಂಡು .ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಪ್ಲಾಸ್ಟಿಕ್ ವೈರಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾದ ಘಟನೆ ನಡೆದಿದ್ದೆ.

ಇನ್ನು ಎರಡು ಘಟನಾ ಸ್ಥಳಕ್ಕೆ ಆಗಮೀಸಿದ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೇಣಿಗೆ ಶರಣಾದ ವ್ಯೆಕ್ತಿಗಳ ದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರಿಕ್ಷೇಗೆ ರವಾನಿಸಲಾಗಿದೆ.