Uncategorized

14.ಕೆಜಿ 185 ಗ್ರಾಂ ಹಸಿ ಗಾಂಜಾ ವಶಪಡಿಸಿಕೊಂಡ ಹುಬ್ಬಳ್ಳಿ ಗ್ರಾಮೀಣ ಹಾಗು ಸಿ ಇ ಎನ್ ಪೊಲೀಸರು

ಗ್ರಾಮೀಣ ಪೊಲೀಸರು ಹಾಗು ಸಿ ಇ ಎನ್ ಪೊಲೀಸರ ಭರ್ಜರಿ ಭೇಟೆ ೧೪ ಕೆಜಿ ೧೮೫ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ‌.
ಬಂಡಿವಾಡ ಗ್ರಾಮದಲ್ಲಿ ಹೇಮರೆಡ್ಡಿ ರಡ್ಡೇರ ಎಂಬಾತ ತನ್ನ ಜಮೀನಿನಲ್ಲಿ ಅಕ್ರಮವಾಗಿ ೭ ಕೆಜಿ ೪೦ ಗ್ರಾಂ  ಗಾಂಜಾ ಬೆಳದಿದ್ದು ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಇನ್ಸಪೆಕ್ಟರ ಮುರುಗೇಶ ಚನ್ನಣ್ಣವರ ಹಾಗು ಸಿಬ್ಬಂದಿಗಳು ದಾಳಿ ಮಾಡಿ ವಶ ಪಡಿಸಿಕೊಂಡಿದ್ದಾರೆ.

ಇನ್ನು  ಶಿರಗುಪ್ಪಾ ಗ್ರಾಮದಲ್ಲಿ ಶಿವಯ್ಯಾ ಮಂಟೂರ ಎಂ‌ಬ ಆರೋಪಿತನು ತನ್ನ ಜಮೀನಿನಲ್ಲಿ ೬ ಕೆಜಿ ೭೮೫ ಗ್ರಾಂ ಗಾಂಜಾ ಗಿಡಗಳನ್ನು ಬೆಳಸಿದ್ದು ಖಚಿತ ಮಾಹಿತಿಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿ ಸಮೆತವಾಗಿ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇನ್ನು ೫೦ ಸಾವಿರಕ್ಕಿಂತಲೂ ಹೆಚ್ಚಿನ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ

ಇನ್ನು ಎರಡು ಪ್ರಕಣಗಳಲ್ಲಿ ಧಾರವಾಡ ಜಿಲ್ಲಾ ಎಸ್ ಪಿ ಗೋಪಾಲ ಬ್ಯಾಕೋಡ. ಎನ್ ವಿ ಭರಮನಿ .ನಾಗರಾಜ ಎಸ್ ಎಂ .ಶಿವಾನಂದ ಕಟಗಿ. ಸಿ ಇ ಎನ್ . ಇವರ ಮಾರ್ಗದರ್ಶನದಲ್ಲಿ

ಇನ್ಸಪೆಕ್ಟರ ಮುರುಗೇಶ ಚನ್ನಣ್ಣವರ ಹಾಗು ಧಾರವಾಡದ ಸಿ ಇ ಎನ್ ಮುರುಗೇಶ ಟಿ ಎಸ್ .ಇವರ ನೇತೃತ್ವದಲ್ಲಿ ಪಿಎಸಐ ಸಚಿನ ಅಲಮೇಲಕರ. ಲಕ್ಷ್ಮೀ ದೇಗಿನಾಳ. ಎ ಎಸ್ ಐ ಎನ್ ಎಂ ಹೊನ್ನಪ್ಪನವರ ಸಿಬ್ಬಂದಿಗಳಾದ ಎ ಎ ಕಾಕರ. ಮಾಂತೇಶ ಮದ್ದಿನ. ಯು ಡಿ ದೂದಾಳಕರ ಎಂ ಜಿ ಕಾರ್ಲವಾಡ. ಎಂ ಬಿ ಕಂಬೋಗಿ. ಬಸವರಾಜ ಶಿರಕೋಳ. ಡಿ ಎಂ ಬಳಿಗೇರ. ಶ್ರೀ ಬಾಗಲಕೋಟಿ. ಎಸ್ ಐ ಜವಳಿ. ಎನ್ ಬಿ ಕರಜಗಿ. ಬಿ ಆರ್ ಬನಹಟ್ಟಿ. ವೈ ಎಚ ಪಾಟೀಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಎಸ್ ಪಿ ಗೋಪಾಲ್ ಬ್ಯಾಕೋಡ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!