ಮನೆಯ ಹಿತ್ತಲದಲ್ಲಿಯೇ ಗಾಂಜಾ ಬೆಳೆದಿದ್ದ ಐನಾತಿ ಅರೆಸ್ಟ್.7 ಕೆಜಿ 455 ಗ್ರಾಂ ಹಸಿ ಗಾಂಜಾ ವಶ….

ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಈಗಾಗಲೇ ಮಾದಕವಸ್ತು ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿರಂತರ ಅಭಿಯಾನ ನಡೆಸಿದ್ದಾರೆ. ಇದೀಗ ಧಾರವಾಡ ಗ್ರಾಮೀಣ ಪ್ರದೇಶದಲ್ಲಿಯೂ ಈ ಅಭಿಯಾನ ಮುಂದುವರೆದಿದ್ದು, ಇದೀಗ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮೀಣ ಡಿವೈಎಸ್ಪಿ ಶಿವಾನಂದ ಕಟಗಿ ಅಕ್ರಮ ಗಾಂಜಾ ಕುಳಗಳ ಕೈಗೆ ಬೇಡಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ದಕ್ಷ ಅಧಿಕಾರಿ ಶಿವಾನಂದ ಕಟಗಿ ಬೆಂಗಳೂರಿನಿಂದ ಧಾರವಾಡಕ್ಕೆ ವರ್ಗಾವಣೆಗೊಂಡು ಇಪ್ಪತ್ತು ದಿನಗಳು ಸಹ ಕಳೆದಿಲ್ಲ. ಆಗಲೇ ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಅದರಂತೆ ಸಿ ಇ ಎನ್ ಪೊಲೀಸರ ಕಾರ್ಯಾಚರಣೆ. ಧಾರವಾಡ ಗ್ರಾಮೀಣ ಭಾಗದ ಕರಡಿಗುಡ್ಡ ಗ್ರಾಮದ ನಿವಾಸಿ ಶಿವಪ್ಪ ಕೊಟ್ಟೂರು ಎಂಬಾತ ತನ್ನ ಮನೆಯ ಹಿತ್ತಲಿನಲ್ಲಿಯೇ ಅಕ್ರಮವಾಗಿ ಗಾಂಜಾ ಬೆಳೆದಿದ್ದ.

ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಬರೋಬರಿ 7 ಕೆಜಿ 455 ಗ್ರಾಂ ಹಸಿ ಗಾಂಜಾ ಗಿಡಗಳನ್ನು ಆರೋಪಿ ಸಮೇತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಈ ಒಂದು ಕಾರ್ಯಾಚರಣೆ ಧಾರವಾಡ ಜಿಲ್ಲೆ ಎಸ್ಪಿ ಗೋಪಾಲ್ ಬ್ಯಾಕೋಡ್, ಹೆಚ್ಚುವರಿ ಅಧಿಕ್ಷಿಕ ಎನ್.ವಿ.ಭರಮನಿ, ಡಿವೈಎಸ್ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಸಿಇಎನ್ ಇನ್ಸ್ಪೆಕ್ಟರ್ ಮುರುಗೇಶ ಟಿಎಸ್ ಅವರ ನೇತೃತ್ವದಲ್ಲಿ ಪಿಎಸ್ಐ ಲಕ್ಷ್ಮೀ ದೇಗಿನಾಳ, ಸಿಬ್ಬಂದಿಗಳಾದ ಯು.ಡಿ.ದೂದಾಳಕರ, ಎಂ.ಬಿ.ಕಂಬೋಗಿ, ಬಸವರಾಜ ಶಿರಕೋಳ, ಡಿ.ಎಂ.ಬಳಿಗೇರ್, ಪಿ.ಸಿ.ಬಾಗಲಕೋಟೆ, ಎಸ್.ಐ.ಜವಳಿ, ಎನ್.ಬಿ.ಕರ್ಜಗಿ, ಬಿ.ಆರ್.ಬನಹಟ್ಟಿ, ವೈ.ಎಚ್.ಪಾಟೀಲ್ ಭಾಗವಹಿಸಿದ್ದಾರೆ.