ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ…..!!!!

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊರ್ವನಿಗೆ ಮೂವರ ಗುಂಪೊಂದು ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಲ್ಲಿ ನಡೆದಿದೆ.
ರೈಲ್ವೆ ನಿಲ್ದಾಣದ ವಿಐಪಿ ಪಾರ್ಕಿಂಗ್ ಸ್ಥಳದಲ್ಲಿ ಶ್ರೀನಿವಾಸ್ ಎಂಬಾತನಿಗೆ ಸಚಿನ್, ಸುನಿಲ್ ಹಾಗೂ ವಿಶಾಲ ಎಂಬಾತರು ಹಲ್ಲೆ ಮಾಡಿದ್ದಾರೆ.
ಶ್ರೀನಿವಾಸ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ, ಹಲ್ಲೆ ಮಾಡಿದವರು ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ಹಲ್ಲೆ ಮಾಡಿದವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ, ಇದೇ ವಿಚಾರಕ್ಕೆ ಶ್ರೀನಿವಾಸನಿಗೆ ಮೂರು ದಿನಗಳ ಹಿಂದೆ ಜೀವ ಬೆದರಿಕೆ ಹಾಕಿದ್ದಾರಂತೆ,
ಇಂದು ಏಕಾಏಕಿ ಶ್ರೀನಿವಾಸ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಶ್ರೀನಿವಾಸನ ಕಣ್ಣು, ಎದೆ, ಕೈ, ಬೆನ್ನು ಹಾಗೂ ಇನ್ನಿತರ ಭಾಗಗಳಿಗೆ ಗಾಯಗಳಾಗಿವೆ.
ಸದ್ಯ ಶ್ರೀನಿವಾಸ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ತನಗೆ ಜೀವ ಭಯವಿದೆ, ತನಗೆ ನ್ಯಾಯ ಒದಗಿಸಬೇಕೆಂದು ಕಣ್ಣೀರು ಹಾಕಿದ್ದಾನೆ.
ಈ ಘಟನೆ ಶರಹ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.