ಕಳೆದ ಒಂದೇ ತಿಂಗಳಲ್ಲಿ ಒಂದೇ ಮನೆಯನ್ನು ಎರಡು ಬಾರಿ ಕಳ್ಳತನ ಮಾಡಿದ ಚಾಲಾಕಿ ಕಳ್ಳ. ಸಿಸಿ ಟಿವಿಯಲ್ಲಿ ಸೆರೆ ಆದ ಕಳ್ಳನ ಚಾಲಾಕಿತನ್

ಒಂದೇ ಮನೆಯನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿರುವ ಘಟನೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಟೂರ ರಸ್ತೆಯ ಬುದ್ದ ವಿಹಾರ ಪ್ಲಾಟ್ ನ ಬಿ ಜೆ ಜೋಸೆಫ್ ಎಂಬುವವರ ಮನೆಯನ್ನು ಚಾಲಾಕಿ ಕಳ್ಳ ಕಳ್ಳತನ ಮಾಡಿ ಪರಾರಿ ಆಗಿದ್ದಾನೆ.
ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಒಂದೇ ಮನೆಯನ್ನು ಚಾಲಾಕಿ ಕಳ್ಳ ತನ್ನ ಕೈ ಚಳಕ ತೋರಿಸಿದ್ದಾನೆ. ಮನೆಗೆ ಬಿಗ್ ಹಾಕಿಕೊಂಡು ಊರಿಗೆ ಹೋಗಿದ್ದೆ ತಡ .ಮನೆಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಿದ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆ ಆಗಿದೆ.
ಹೋದ ವಾರ ಮನೆಯಲ್ಲಿ ಇದ್ದ ತಾಮ್ರದ ಪಾತ್ರೆಗಳನ್ನು ಕಳ್ಳತನ ಮಾಡಿದ್ದ ಅದೆ ಕಳ್ಳ ನಿನ್ನೆ ತಡ ರಾತ್ರಿ ಮತ್ತೆ ಅದೆ ಮನೆಯನ್ನ ಬಿಗ್ ಕಟ್ಟ ಮಾಡಿ ಬಿರುವಿನಲ್ಲಿದ್ದ ಹಣ ಹಾಗು ಮನೆಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿ ಆಗಿದ್ದಾನೆ.
ಇನ್ನು ಈ ಕುರಿತು ಹುಬ್ಬಳ್ಳಿಯ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.