Uncategorized

ರಾಮ ನವಮಿ,ಶಿವಾಜಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಂಧ ಶೇಟ್ ಗೆ ಸನ್ಮಾನ

ರಾಮ ನವಮಿ ಆಚರಣೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಂಡು ಬಂದಿತು.ನಗರದ ಹಲವೆಡೆ ಈ ಒಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಇನ್ನೂ ನಗರದ ಬಾನಿ ಓಣಿಯಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ,ಕೆಜಿಪಿ ಗ್ರೂಪ್ ಫೌಂಡೇಶನ್ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು.

ವಿಶೇಷವಾಗಿ ಶ್ರೀರಾಮ ನವಮಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ವಿಶೇಷವಾಗಿ ಆಚರಣೆಯನ್ನು ಮಾಡಿದ್ದು ಕಂಡು ಬಂದಿತು ಕಾರ್ಯಕ್ರಮ ದಲ್ಲಿ ಕೆಜಿಪಿ ಫೌಂಡೇಶನ್ ನಿಂದ ಪಾಲ್ಗೊಂಡು ಶುಭಹಾರೈಸಲಾಯಿತು‌‌.ಇದೇ ವೇಳೆ ಸಂಘಟನೆ ವತಿಯಿಂದ ಶ್ರೀಗಂಧ ಶೇಟ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಒಂದು ಸಂದರ್ಭದಲ್ಲಿ ಮೂರು ಸಾವಿರ ಮಠದ ಸ್ವಾಮೀಜಿ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ,ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬಿಜೆಪಿ ಪಕ್ಷದ ಮುಖಂಡರಾದ ಲಿಂಗರಾಜ ಪಾಟೀಲ್, ವಸಂತ ಹೊರಟ್ಟಿ,ಈಶ್ವರ ಶಿರಕೋಳ,ಸುಬ್ರಹ್ಮಣ್ಯ ಶಿರಕೋಳ,ಮಲ್ಲಪ್ಪ ಶಿರಕೋಳ, ಅನುಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!