ವಯೋವೃದ್ದರ ಮೇಲೆ ಹಲ್ಲೆ ಮಾಡಿದ ಬೀದಿ ಬದಿ ಹಣ್ಣಿನ ವ್ಯಾಪಾರಿ

ಛೋಟಾ ಮುಂಬಯಿ ಅಂತಾ ಕರೆಸಿಕೊಳ್ಳುವ ಹುಬ್ಬಳ್ಳಿಯ ಜನತಾ ಬಜಾರ ನಲ್ಲಿ ರಸ್ತೆ ಬದಿಯಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವವರು ಗ್ರಾಹಕರಿಗೆ ಮೋಸ ಮಾಡುತಿದ್ದು, ಮೋಸ ಮಾಡುವುದಲ್ಲದೇ ಗ್ರಾಹಕರ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ. ಯಾವ ರೀತಿಯಲ್ಲಿ ವಯೋವೃದ್ದರ ಮೇಲೆ ಹಲ್ಲೆ ಮಾಡಿದ್ದಾರೆ ನೀವೆ ನೋಡಿ ಇನ್ನು ವ್ಯಾಪಾರಸ್ಥರ ಈ ಮೋಸದಾಟಕ್ಕೆ ಸಾರ್ವಜನಿಕರು ಬೇಸತ್ತು ಅಂಗಡಿಯವರ ಮೇಲೆ ಹಿಡಿ ಶಾಪ ಹಾಕುತಿದ್ದಾರೆ. ಇನ್ನು ಜನತಾ ಬಜಾರ ಹತ್ತಿರ ಗ್ರಾಹಕರೇ ಹಣ್ಣು ತರಕಾರಿ ಕೊಳ್ಳುವ ಮೊದಲು ಹುಷಾರಾಗಿರಿ ಹೇಗೆ ಮೋಸಾ ಮಡುತ್ತಾರೆ ಅಂದ್ರೆ ಒಂದು ಕೇಜಿ ಅಂತಾ ಹೇಳಿ ೨೫ ಗ್ರಾಂ ಮೋಸ ಮಾಡುತ್ತಾರೆ. ಅದನ್ನು ಪ್ರಶ್ನೆ ಮಾಡಿದರೆ ನಿಮಗೆ ಅಂಗಡಿಯವರಿಂದಾ ಹಿಗ್ಗಾ ಮುಗ್ಗಾ ಗೂಸಾ ಬೀಳೋದು ಖಚಿತ.
ಹಣ್ಣು ಖರೀದಿ ಮಾಡಿದ ವಯೋವೃದ್ದ ದಂಪತಿಗೆ ಕಡಿಮೆ ತೂಕ ಯಾಕೆ ಅಂತಾ ಕೇಳಿದಕ್ಕೆ ವಯೋ ವೃದ್ದರು ಅಂತಾ ನೋಡದೇ ಅಂಗಡಿ ಮಾಲಿಕ ಕಪಾಳಕ್ಕೆ ಹೊಡೆದಿದ್ದಾನೆ. ಅಲ್ಲದೆ ಕಾಲಿನಿಂದ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಜನತಾ ಬಜಾರನಲ್ಲಿ ನಡೆದಿದೆ. ವಯೋ ವೃದ್ದರಿಗೆ ಅಂಗಡಿ ಮಾಲಿಕ ಹೊಡೆದಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಣ್ಣಿನ ವ್ಯಾಪಾರಸ್ಥನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಈ ರೀತಿ ವಯೋ ವೃದ್ದರ ಮೇಲೆ ಗೂಂಡಾ ವರ್ತನೆ ಮಾಡಿದ ವ್ಯಾಪಾರಸ್ಥಮ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬರುತ್ತಿದೆ.
