ಟ್ಯಾಂಕರ್ ಗೆ ಬೈಕ ಡಿಕ್ಕಿ ಸ್ಥಳದಲ್ಲೆ ಹು ಡಾ ಅಧ್ಯಕ್ಷನ ಮಗನ ಸಾವು

ಹುಬ್ಬಳ್ಳಿ; ನಗರದ ಹೊರ ಹೊಲಯದ ತಾರಿಹಾಲ್ ಬೈಪಾಸ್ ಹತ್ತಿರ ಟ್ಯಾಂಕರ್ ವೊಂದಕ್ಕೆ ಬೈಕ್ ಹಿಂಬದಿ ಇಂದ ಡಿಕ್ಕಿ ಆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಡರಾತ್ರಿ ನಡೆದಿದೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಸಂಸ್ಥೆ ಮಾಜಿ ಅಧ್ಯಕ್ಷ ನಾಗೇಶ ಕಲಬುರಗಿ ಅವರ ಮೂರನೆಯ ಪುತ್ರ ತಿಲಕ್ ಕಲಬುರಗಿ( ೧೯) ಎಂದು ಗುರುತಿಸಲಾಗಿದೆ. ತಿಲಕ್ ಹಾಗು ನಾರಾಯಣ ಇವರು ಪ್ರತಿ ಶನಿವಾರ ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಹೋಗುತಿದ್ದು ಆದ್ರೆ ಈ ಶನಿವಾರ ಅನಿವಾರ್ಯ ಕಾರಣದಿಂದ ಹೊಗಲಿಕ್ಕೆ ಆಗಲಿಲ್ಲಾ ಆದರಿಂದ ರವಿವಾರ ತನ್ನ ಗೆಳೆಯನ ಜೊತೆ ಬೈಕನಲ್ಲಿ ಹೋಗುತಿದ್ದಾಗ ಎದುರಿಗೆ ಚಲುಸಿತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೆ ಇಬ್ಬಾಗ ವಾಗಿ ಮೃತಪಟ್ಟರೆ ಆತನ ಗೆಳೆಯ ನಾರಾಯಣ ದೊಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಚಿಂತಾಜನಕ ವಾಗಿದೆ ಇನ್ನು ತಿಲಕ ಮೃತ ದೇಹವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಬಿಸಿದ್ದಾರೆ ಇನ್ನು
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಅಕ್ರಮ ನಿವೇಶನಗಳಿಗೆ ಸಿಂಹ ಸ್ವಪ್ನವಾಗಿದ್ದ ನಾಗುಸಾ ಕಲ್ಬುರ್ಗಿ ಅವರ ವಿರುದ್ಧ ಅಕ್ರಮ ನಿವೇಶನಗಳನ್ನು ಮಾರಾಟ ಮಾಡುತಿದ್ದ ಕುಳಗಳಿಗೆ ಬಲಿ ಆಯಿತಾ ಈ ಜೀವ ಎಂದು ಕಿಮ್ಸ್ ಹತ್ತಿರ ಇದ್ದ ಸಾರ್ವಜನಿಕರ ಗುಸು ಗುಸು ಮಾತು ಇನ್ನೂ ಹೆಚ್ಚು ವದಂತಿಗೆ ಕಾರಣವಾಗಿದೆ… ಈ ಅಪಘಾತ ಕುರಿತು ಸಾರ್ವಜನಿಕರಲ್ಲಿ ಸಂಶಯ ವ್ಯೆಕ್ತ ವಾಗಿದ್ದು ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಎಸ್ ಪಿ ಯವರು ಇದಕ್ಕೆ ಸರಿಯಾದ ಮಾಹಿತಿ ನೀಡಬೇಕಾಗಿದೆ
