ಅತ್ತಿಗೆಯ ಚಾಕುವಿನಿಂದ ಕೊಲೆ ಮಾಡಿ ಪರಾರಿಯಾದ ಮೈದುನ

ಅಣ್ಣ-ತಮ್ಮರ ಜಗಳವನ್ನು ಬಿಡಿಸಲು ನಡುವೆ ಬಂದಿದ್ದ ಅತ್ತಿಗೆಯ ಕುತ್ತಿಗೆಯನ್ನು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಎಸ್.ಎಮ್.ಕೃಷ್ಣ ನಗರದಲ್ಲಿ ನಡೆದಿದೆ.

ಸಾಜಿದಾಭಾನು ಮೃತ ದುರ್ದೈವಿಯಾಗಿದ್ದು, ಈಕೆಯ ಪತಿ ಹಾಗೂ ಮೈದುನ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ಪ್ರಾರಂಭವಾಗಿದೆ. ಬಳಿಕ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಜಗಳವನ್ನು ಬಿಡಿಸಲು ಬಂದಿದ್ದ ಸಾಜಿದಾಭಾನು ಕುತ್ತಿಗೆಯನ್ನು ಮೈದುನ ನಾಸೀರ್ ನಾಲಬಂದ ಸೀಳಿದ್ದಾನೆ.

ಇನ್ನು ರಕ್ತಸ್ರಾವ ಆಗುತ್ತಿದ್ದ ಸಾಜಿದಾಭಾನುವನ್ನು ಚಿಕಿತ್ಸೆಗಾಗಿ ಕಿಂಸಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿ ಆಗದ ಪರಿಣಾಮ ಸಾಜಿದಾಭಾನು ತೀವ್ರವಾದ ರಕ್ತಸ್ರಾವದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾಳೆ.
ಈ ಘಟನೆ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಕಸಬಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಜಾಲ ಬೀಸಿದ್ದಾರೆ .