ಇನ್ಸಪೆಕ್ಟರ ಶ್ರೀಶೈಲ ಕೌಜಲಗಿ & ಟೀಮ್ ಕಾರ್ಯಾಚರಣೆ ಚಾಲಾಕಿ ಕಳ್ಳನ ಬಂಧನ

ಕಲಘಟಗಿ ತಾಲೂಕಿನ ಚಳಮಟ್ಟಿ ಗ್ರಾಮದಲ್ಲಿ 5 ತಿಂಗಳ ಹಿಂದುಗಡೆ ನಡೆದ ಮನೆ ಕಳ್ಳತನ ಪ್ರಕರಣ ಭೇದಿಸುವಲ್ಲಿ ಕಲಘಟಗಿ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಇನ್ಸ್ಪೆಕ್ಟರ್ ಶ್ರೀಶೈಲ್ ಕೌಜಲಗಿ ನೇತೃತ್ವದ ತಂಡ ಒಬ್ಬ ಆರೋಪಿಯನ್ನು ಬಂಧಿಸಿ ಸುಮಾರು ಒಂದು ಲಕ್ಷದ 15 ಸಾವಿರ ಬೆಲೆಬಾಳುವ 13 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಅಶೋಕ್ ರಾಮಪ್ಪ ಕೊರ್ಚರ್ ಬಂಧಿತ ಆರೋಪಿಯಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಇನ್ನು ಈ ಒಂದು ಕಾರ್ಯಾಚರಣೆಯಲ್ಲಿ ಪಿಎಸ್ಐ ಗಿರೀಶ್ ಎಂ ಹಾಗೂ ಅಪರಾಧ ಘಟಕದ ಪಿಎಸ್ಐ ಸಿಎನ್ ಕರಿವೀರಪ್ಪನವರ್ ಸಿಬ್ಬಂದಿಗಳಾದ ಲೋಕೇಶ್ ಬೆಂಡಿಕಾಯಿ, ಮಾಂತೇಶ್ ನಾನ ಗೌಡ ಗೋಪಾಲ್ ಪೀರಗಿ ,ಮಲ್ಲಿಕಾರ್ಜುನ್ ಸಜ್ಜನ್ ಹಾಗೂ ಯಶ್ವಂತ್, ರವರು ಪಾಲ್ಗೊಂಡಿದ್ದರು