ಮೋದಿ ನನ್ನ ದೇವರು .ಭದ್ರತೆ ಲೆಕ್ಕಿಸದೆ ಹಾರ ಹಾಕಲು ಹೋದ ಬಾಲಕನ ಮನದಾಳದ ಮಾತು

ಹುಬ್ಬಳ್ಳಿ;ಗುರುವಾರ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನಕ್ಕೆ ವಾಹನದಲ್ಲಿ ಹೋಗವ ವೇಳೆ ಪ್ರಧಾನಿಗೆ ಬಾಲಕನೋರ್ವ ಹಾರ ಹಾಕಲು ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಬಾಲಕ ಕುನಾಲ್
ಧೋಂಗಡಿ ಸಾಕಷ್ಟು ಸಂತಸ ಪಟ್ಟಿದ್ದು ನನಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನಷ್ಟು ಹತ್ತಿರದಿಂದ ನೋಡಬೇಕು ಹಾಗೂ ಅವರನ್ನು ಮನೆಗೆ ಕರೆಯುವುದು ಮತ್ತು ಅವರ ಭಾಷಣದಿಂದ ಫೀದಾ ಆಗಿದ್ದೇನೆ ಅಂತಾ ಕುನಾಲ್ ಧೋಂಗಡಿ ತನ್ನ
ಮನದಾಳದ ಮಾತು ಹೇಳಿದ್ದಾನೆ .
ಪ್ರಧಾನಿ ನರೇಂದ್ರ ಮೋದಿ ಅವರು ಅಂದರೆ ಬಹಳ ಪ್ರೀತಿ. ಹೀಗಾಗಿ ಪ್ರಧಾನಿ ಮೋದಿ ನೋಡಲು ನನ್ನ ಅಜ್ಜ, ಮಾವ, ಎರಡುವರೆ ವರ್ಷದ ಮಗು ಜೊತೆ ಹೋಗಿದ್ವಿ. ಮಗುಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಡ್ರೆಸ್ ಹಾಕಿಸಿದ್ವಿ, ಮಗು ಕಡೆಯಿಂದ ಪ್ರಧಾನಿಗಳಿಗೆ ಹಾರ ಕೊಡಿಸಬೇಕು ಅಂತ ಅಂದುಕೊಂಡಿದ್ವಿ. ಆದರೆ ಸಾಧ್ಯವಾಗಲಿಲ್ಲ ಹೀಗಾಗಿ ನಾನೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್ ಹ್ಯಾಂಡ್ ಮಾಡಬೇಕೆಂಬ ಆಸೆ ಇತ್ತು, ಆದರೆ ಪೊಲೀಸರು ನನ್ನನ್ನು ತಡೆದರು ಎಂದು ಹೇಳಿದ್ದಾನೆ.
ನಾನು ಅವರನ್ನ ಭೇಟಿ ಆಗಬೇಕು, ಹತ್ತಿರದಿಂದ ನೋಡಬೇಕೆಂದು ಬಹಳ ದಿನದಿಂದ ಆಸೆ ಇತ್ತು. ಮೋದಿ ಮನುಷ್ಯರ ಅಲ್ಲ, ಅವರು ದೇವರು ಹಾಗಾಗಿ ನಾನು ಅವರನ್ನು ನೊಡೋಕೆ ಹೋಗಿದ್ದೆ. ನನಗೆ ಅವರ ಎಡಗೈ ಟಚ್ ಆಗಿದೆ. ಹಾರ ತೆಗೆದುಕೊಂಡರು ನಾನು 2 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡಕ್ಕೆ ಬಂದಾಗ ನೋಡಿದ್ದೆ. ಈಗ ಮತ್ತೆ ಮೋದಿ ಬರುವ ವಿಚಾರ ತಿಳಿದು ನೋಡಲು ಹೋಗಿದ್ದೆ.