ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್

ಹುಬ್ಬಳ್ಳಿಯಲ್ಲಿ ಮತ್ತೆ ಮುನ್ನಲೆಗೆ ಬಂದ ನೇಹಾ ಹಿರೇಮಠ ಕೊಲೆ ಪ್ರಕರಣ. ನಿನ್ನೆ ಪ್ರಕರಣ ಸಿಬಿಐಗೆ ಕೊಡುವಂತೆ ಆಗ್ರಹಿಸಿದ್ದ,ಮುತಾಲಿಕ್ ಇಂದು ಮತ್ತೊಂದು ಹೋರಾಟಕ್ಕೆ ಮುಂದಾಗಿದ್ದರು.ಇನ್ನು ಅದರಲ್ಲಿ ಮುತಾಲಿಕ್ ಯಶಸ್ವಿಯಾಗಿದ್ದಾರೆ.

ನೇಹಾ ಹಂತಕ ಫಯಾಜ್ ನನ್ನ ಮುತಾಲಿಕ್ ಇಂದು ಕಾಲೇಜ್ ನಿಂದ ಅಮಾನತ್ತು ಮಾಡಿಸಿದ್ದಾರೆ.ಹೌದು ಮಾಹಿತಿ ಆಧಾರದ ಮೇಲೆ ಹುಬ್ಬಳ್ಳಿಯ ಪಿಸಿ ಜಾಬೀನ್ ಕಾಲೇಜ್ ಗೆ ಭೇಟಿ ನೀಡಿ ಮುತಾಲಿಕ್ ಫಯಾಜ್ ಬಗ್ಗೆ ವಿಚಾರಣೆ ಮಾಡಿದ್ರು.ಫಯಾಜ್ ಬಿಸಿಎ ವ್ಯಾಸಂಗ ಮಾಡತಿದ್ದ ಎಂದು ಪ್ರಿನ್ಸಿಪಲ್ ಹೇಳಿದರು.ಹಾಗಾದ್ರೆ ಕೊಲೆ ಮಾಡಿದವನನ್ನ ಯಾಕೆ ಅಮಾನತ್ತು ಮಾಡಿಲ್ಲ ಎಂದು ಮುತಾಲಿಕ್ ಪ್ರಿನ್ಸಿಪಲ್ ನನ್ನ ತರಾಟೆಗೆ ತಗೆದುಕೊಂಡರು.
ಅವಾಗ ಎಚ್ಚೆತ್ತ ಪ್ರಿನ್ಸಿಪಲ್ ಶಾಶ್ವತವಾಗಿ ಫಯಾಜ್ ನನ್ನ ಅಮಾನತ್ತು ಮಾಡ್ತೀವಿ ಎಂದು ಪ್ರಿನ್ಸಿಪಲ್ ಫಯಾಜ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ರು