ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರತ ಕಂಡಕ್ಟರಗೆ ಥಳಿಸಿದ ಪ್ರಯಾಣಿಕ

ಚಲುಸುತ್ತಿದ್ದ ಬಸ್ಸಿನಲ್ಲಿ ಟಿಕೆಟ್ ನೀಡುವ ವಿಚಾರಕ್ಕೆ ಸಾರಿಗೆ ಕಂಡಕ್ಟರ್ ಮೇಲೆ ಪ್ರಯಾಣಿಕರೊಬ್ಬರು ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಹುಬ್ಬಳ್ಳಿಯ ಸಿಬಿಟಿಯಿಂದ ಗಾಮನಗಟ್ಟಿಗೆ ಹೊರಟ ಸಾರಿಗೆ ಬಸ್‌ನಲ್ಲಿ ಉಣಕಲ್ ನಿಲ್ದಾಣದಿಂದ ಪ್ರಯಾಣ ಬೆಳೆಸಿದ ವ್ಯಕ್ತಿ ಓಂ ಶಾಂತಿ ಆಶ್ರಮಕ್ಕೆ ಟಿಕೆಟ್ ತೆಗೆದುಕೊಂಡಿದ್ದಾನೆ.
ಕಂಡಕ್ಟರ್ ಸ್ಟೇಜ್ ಪ್ರಕಾರ ಟಿಕೆಟ್ ನೀಡಿದಾಗ ಟಿಕೆಟ್‌ನಲ್ಲಿ ಗಾಮನಗಟ್ಟಿ ಎಂದು ಮುದ್ರಣವಾಗಿದ್ದುಗೊತ್ತಾಗಿ. ಕೊಡಲೆ ಪ್ರಯಾಣಿಕ ಕಂಡಕ್ಟರ್ ನನ್ನು ತಾವು ಓಂ ಶಾಂತಿ ಆಶ್ರಮದ ನಿಲ್ದಾಣಕ್ಕೆ ಟಿಕೆಟ್ ಕೇಳಿದ್ರೆ ! ನೀವ್ಯಾಕೆ ? ಗಾಮನಗಟ್ಟಿ ಕೊಟ್ಟಿದ್ದೀರಿ ಎಂದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಮೇಲೆ ಟಿಕೆಟ್ ನೀಡುವ ಮಶೀನ್ ಕಸಿದುಕೊಂಡು ಹಲ್ಲೆ ಮಾಡಿದ್ದಾನೆ.
ತೀವ್ರ ರಕ್ತಸ್ರಾವವಾಗುತ್ತಿದ್ದ ಕಂಡಕ್ಟರ್‌ನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ನಿಡಿದ್ದು ತೆಲೆಗೆ ನಾಲ್ಕು ಹೊಲಿಗೆ ಬಿದ್ದಿದೆ.
ಘಟನೆಯಲ್ಲಿ ಗಾಯಗೊಂಡ ಇಸ್ಮಾಯಿಲ್ ಹಂಚಿನಮನಿ, ಚಾಲಕ ಶಿವನಾಗಪ್ಪ ವಡಕಣ್ಣನವರ ಹಲ್ಲೆ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇನ್ನು ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ.