ಬೈಕ್ ಗೆ ಬೆಂಕಿ ಹಚ್ಚಿ ಅಂದರ್ ಆದ….ಪಿಳ್ಳೆ

ಹುಬ್ಬಳ್ಳಿಯ ಮಂಟೂರ ರಸ್ತೆಯ ಹರಿಶ್ಚಂದ್ರ ಕಾಲೋನಿಯಲ್ಲಿ ತಡ ರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯೆಕ್ತಿಯೊಬ್ಬ ಬೈಕಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ.
ವಾಸು ಪಿಳ್ಳೆ ಎಂಬ ಯುವಕನೆ ವಿನಾಕಾರಣ ಪದೆ ಪದೇ ಪಕ್ಕದ ಮನೆಯವರ ಹತ್ತಿರ ಜಗಳ ತೆಗೆದು ಅವಾಚ್ಚ ಶಬ್ಧಗಳಿಂದ ನಿಂದಿಸುತ್ತಿದ್ದ .

ಮೊನ್ನೆ ತಡ ರಾತ್ರಿ ಯುವಕ ರೂಪಾ ಎನ್ನುವವರ ಬೈಕಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದು ಇನ್ನು ರೂಪಾ ಅವರ ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಕೆಲವೆ ಗಂಟೆಗಳಲ್ಲಿ ಆರೋಪಿ ವಾಸು ಪಿಳ್ಳೆಯನ್ನು ಬಂದಿಸಿದ್ದಾರೆ.