ಕೇಶ್ವಾಪುರ ಪೊಲೀಸರ ಬೇಟೆ. ದಾಖಲೆ ಇಲ್ಲದ 88.99 ಲಕ್ಷ ಹಣ ವಶ

ದಾಖಲಾತಿ ಇಲ್ಲದೆ ಹಣ ಸಾಗಿಸುತ್ತಿದ್ದ ಮೂರು ಜನರನ್ನು ಖಚಿತ ಮಾಹಿತಿ ಮೇರೆಗೆ ಕೇಶ್ವಾಪುರ ಪೊಲೀಸರು ಬಂದಿಸಿದ್ದಾರೆ. ದಾಖಲಾತಿ ಇಲ್ಲದೇ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 89.99 ಲಕ್ಷ ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಆರೋಪಿಗಳಾದ ಪಾಂಡುರಂಗಪ್ಪ, ಕಮಲಾ ಮತ್ತು ಬಾಲಕೃಷ್ಣ ಎಂಬ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇನ್ನು ಈ ಕುರಿತು ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಹಣ ಯಾರಿಂದ ಯಾರಿಗೆ ಹಣ ತಲುಪಿಸಲಾಗುತ್ತಿತ್ತು ಯಾತಕ್ಕಾಗಿ ಹಣ ಎಲ್ಲಿಂದ ಬಂತು ಅಂತಾ ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಿದೆ