Uncategorized

ಒಬ್ಬರಿಗೆ ನಾಲ್ಕು ಹುದ್ದೆ ಎಲ್ಲದಕ್ಕೂ …….ಆಯುಕ್ತರೆ ಇದೇನಿದು!!

ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದೆ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೇಳೊರು ಇಲ್ಲ ಕೇಳೊರು ಇಲ್ಲ ಎಂಬ ಮಾತಿಗೆ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒರ್ವ ಮಹಿಳಾ ಅಧಿಕಾರಿಗೆ ನಾಲ್ಕು ಹುದ್ದೆಗಳನ್ನು ನೀಡಿರುವುದೇ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ.

ಹೌದು ಧಾರವಾಡದ ಮಹಾನಗರ ಪಾಲಿಕೆಯಲ್ಲಿನ ಉಷಾ ಬೆಂಗೇರಿ ಅಧಿಕಾರಿ ಸಧ್ಯ ವಲಯ ಕಚೇರಿ 2 ರಲ್ಲಿ ಕಿರಿಯ ಅಭಿಯಂತರರಾಗಿ ದ್ದಾರೆ.ಸಾಮಾನ್ಯವಾಗಿ ಒರ್ವ ಅಧಿಕಾರಿಗಳೇ ಕೆಲ ದಿನಗಳವರೆಗೆ ಪ್ರಭಾರಿಯಾಗಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಯೊಂದಿಗೆ ಮತ್ತೊಂದು ಹುದ್ದೆಯನ್ನು ಹೆಚ್ಚುವರಿಯಾಗಿ ನೀಡುತ್ತಾರೆ ಹೀಗಿರುವಾಗ ಇವರಿಗೆ ಸಧ್ಯ ನಾಲ್ಕಕ್ಕೂ ಹೆಚ್ಚು ಹುದ್ದೆಗಳನ್ನು ನೀಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ವಲಯ ಕಚೇರಿ 2 ರಲ್ಲಿನ ಕಿರಿಯ ಅಭಿಯಂತರು,ಅಭಿವೃದ್ದಿ ಅಧಿಕಾರಿ,ಯೋಜನಾ ಮುಖ್ಯಸ್ಥರು,ಹೀಗೆ ನಾಲ್ಕೈದು ಹುದ್ದೆಗಳನ್ನು ನೀಡಿದ್ದಾರೆ.ಇನ್ನೂ ಇದರಿಂದಾಗಿ ಗುತ್ತಿಗೆದಾರರಿಗೆ ಸಾರ್ವಜನಿಕರಿಗೆ ಸರಿಯಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ದೊಡ್ಡ ಸಮಸ್ಯೆ ಎದುರಾಗಿದ್ದು ಈ ಒಂದು ಕುರಿತಂತೆ ಸಾರ್ವಜನಿಕರು ಗುತ್ತಿಗೆದಾರರು ಆಯುಕ್ತರಿಗೆ ಜನಪ್ರತಿನಿಧಿಗಳಿಗೆ ದೂರನ್ನು ನೀಡಿದ್ದಾರೆ ಆದರೂ ಕೂಡಾ ಯಾರು ಈ ಒಂದು ವಿಚಾರ ಕುರಿತಂತೆ ಯಾರು ತಲೆ ಕೇಡಿಸಿಕೊಳ್ಳುತ್ತಿಲ್ಲ ಗಮನ ಹರಿಸುತ್ತಿಲ್ಲ ಇದರಿಂದಾಗಿ ದೊಡ್ಡ ಸಮಸ್ಯೆಯಾಗಿದ್ದು ಸಧ್ಯ ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಬಂದಿರುವ ಡಾ ರುದ್ದೇಶ ಘಾಳಿಯವರು ಇದನ್ನು ಗಂಭೀರವಾಗಿ ತಗೆದುಕೊಂಡು ನಾಲ್ಕು ಹುದ್ದೆಗಳನ್ನು ಒರ್ವ ಅಧಿಕಾರಗೆ ನೀಡಿರುವ ಆದೇಶಕ್ಕೆ ಹೊಸ ಆದೇಶ ಮಾಡಿ

ಉಷಾ ಬೆಂಗೇರಿಯವರಿಗೆ ಒಂದು ಹುದ್ದೆಯನ್ನು ನೀಡಿ ಪಾಲಿಕೆ ಯಲ್ಲಿ ಕೆಲಸ ಕಾರ್ಯಗಳು ಸರಳವಾಗಿ ನಡೆಯುವಂತೆ ಮಾಡ್ತಾರಾ ಎಂಬೊದನ್ನು ಕಾದು ನೋಡಬೇಕಿದೆ.ಇನ್ನೂ ಉಷಾ ಬೆಂಗೇರಿ ಯವರು ಒಂದೊದು ಪೈಲ್ ಗಳಿಗೆ ಗುತ್ತಿಗೆದಾರರಿಂದ ಎಷ್ಟು ಫೀಕ್ಸ್ ಮಾಡಿದ್ದಾರೆ ಎಂಬೊದನ್ನು ದಾಖಲೆ ಸಮೇತವಾಗಿ ಮುಂದೆ ನಿರೀಕ್ಷಿಸಿ.ಒಟ್ಟಾರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೇಳೊರು ಕೇಳೊರು ಇಲ್ಲ ಎಂಬಂತಾಗಿದ್ದು ಗುತ್ತಿಗೆದಾರರು ಸಾರ್ವಜನಿಕರು ಅಸಮಧಾನಗೊಂಡಿದ್ದು ಇದೇಲ್ಲದಕ್ಕೂ ಡಾ ರುದ್ರೇಶ ಘಾಳಿಯವರು ಚಿಕಿತ್ಸೆ ನೀಡ್ತಾರೆ ಎಂಬೊದನ್ನು ಪಾಲಿಕೆಯಲ್ಲಿನ ಗುತ್ತಿಗೆದಾರರು ಸಾರ್ವಜನಿಕರು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!