ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ . ಸಿ ಸಿ ಟಿವಿಯಲ್ಲಿ ದೃಶ್ಯ ಸೆರೆ……..

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಹಲ್ಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ.
ಶಂಕರ ಕಬ್ಬಿ ಎಂಬಾತನ ಮೇಲೆಯೇ ಹಲ್ಲೆ ಮಾಡಲಾಗಿದ್ದು, ನೂಲ್ವಿ ಗ್ರಾಮದ ಮಲ್ಲಿಕಾರ್ಜುನ ಕಿಚಡಿ, ನವೀನ ಧರ್ಮಗೌಡ್ರ, ಮನೋಜ್ ಧರ್ಮಗೌಡ್ರ, ರೇವಣಸಿದ್ದ ಕಮ್ಮಾರ, ಚಂದ್ರು ಧರ್ಮಗೌಡ್ರ, ದೇವು ಧರ್ಮಗೌಡ್ರ ಎಂಬಾತರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ನೂಲ್ವಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಗ್ರಾಮದೇವತೆಯರ ಜಾತ್ರೆ ನಡೆಯುತ್ತಿದ್ದು, ಬುಧವಾರ ಗ್ರಾಮದ ಸರ್ಕಲ್ ಬಳಿಯಲ್ಲಿ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮನಬಂದಂತೆ ಹಲ್ಲೆ ಮಾಡಿದಲ್ಲದೇ, ಪಕ್ಕಡದಿಂದ ತಲೆಗೆ ಹೊಡೆದು, ಚಾಕುವಿನಿಂದ ಹಲ್ಲೆ ಮಾಡಿದ್ದಾರಂತೆ.
ಸದ್ಯ ಗಾಯಗೊಂಡ ಶಂಕರ ಕಬ್ಬಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ತನಗೆ ಜೀವ ಭಯವಿದ್ದು, ಏನಾದರೂ ಆದ್ರೆ ಹಲ್ಲೆ ಮಾಡಿದವರೇ ನೇರ ಕಾರಣ, ನ್ಯಾಯ ಒದಗಿಸಿಕೊಡಬೇಕೆಂದು ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡಿದ್ದಾನೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು .ಪೊಲೀಸರು ತನಿಖೆ ಪ್ರಾರಂಬಿಸಿದ್ದಾರೆ