ಸೊಸೆಯನ್ನು ಕೊಂದ ಮಾವ. ಮಾವನನ್ನು ಕಂಬಕ್ಕೆ ಕಟ್ಟಿ ಹಾಕಿದ ಕುಟುಂಬಸ್ಥರು…….

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲಕೊಪ್ಪ ಗ್ರಾಮದಲ್ಲಿ 35 ವರ್ಷದ ಸಕ್ಕೂಬಾಯಿಯನ್ನು ಆಕೆಯ ಮಾವನೆ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೌಟುಂಬಿಕ ಕಲಹ ಹಿನ್ನಲೆ ಮಾವನೆ ತನ್ನ ಸೊಸೆ ಸಕ್ಕೂಬಾಯಿಯ ಕೊಲೆ ಮಾಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ಕೊಲೆ ಮಾಡಿದ ಆರೋಪಿಯಾದ ಶಿವಾಜಿಯನ್ನು ಕುಟುಂಬದಸ್ಥರು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಇನ್ನು ಸ್ಥಳಕ್ಕೆ ಆಗಮಿಸಿದರು ಕಲಘಟಗಿ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಪ್ರಾರಂಬಿಸಿದ್ದಾರೆ.