ಹುಬ್ಬಳ್ಳಿಯಲ್ಲಿ ಪ್ರಯಾಣಿಕ ಬಸ್ಸಿನ ಮುಂದೆ ಮಲಗಿ ಹೈಡ್ರಾಮಾ ….!! ಯಾಕೆ ಅಂತಾ ನೀವೇ ನೋಡಿ..

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪ್ರಯಾಣಿಕನಿಂದ ಹೈಡ್ರಾಮಾ, ಹೌದು, ಮೊದಲೇ ಹುಬ್ಬಳ್ಳಿಯಲ್ಲಿ ಪ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಹೀಗಿರುವಾಗ ಖಾಸಗಿ ಸಾರಿಗೆ ಬಸ್ಸೊಂದು ಸಂಪೂರ್ಣವಾಗಿ ಪ್ರಯಾಣಿಕರಿಂದ ಭರ್ತಿಯಾಗಿದೆ. ಈ ವೇಳೆ ಪ್ರಯಾಣಿಕನೊರ್ವ ಬಸ್ಸಿನ ಚಾಲಕ ಒಳಗಡೆ ಹೋಗಿ ನಿಲ್ಲಿ ಎಂದು ಹೇಳಿದ್ದೆ ತಡಾ ಬಸ್ಸಿನಿಂದ ಇಳಿದು ಬಸ್ಸಿನ ಮುಂಭಾಗದಲ್ಲಿ ಅಡ್ಡಲಾಗಿ ಮಲಗಿ ಹೈಡ್ರಾಮಾ ಮಾಡಿದ್ದಾನೆ. ಈ ಘಟನೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಬೇಂದ್ರೆ ನಗರ ಸಾರಿಗೆ ಬಸ್ಸೊಂದು ಸಂಪೂರ್ಣವಾಗಿ ಪ್ರಯಾಣಿಕರಿಂದ ಭರ್ತಿಯಾಗಿದೆ. ಈ ವೇಳೆ ಚೆನ್ನಮ್ಮ ವೃತ್ತದ ಬಳಿಯಲ್ಲಿ ಅದೇ ಬಸ್ಸಿನಲ್ಲಿ ಪ್ರಯಾಣಿಸಲು ಹತ್ತಿದ್ದ ಅಪ್ಪ, ಮಕ್ಕಳಿಗೆ ಆದಷ್ಟು ಬಸ್ಸಿನ ಒಳಗಡೆ ಹೋಗಿ ಎಂದು ಚಾಲಕ ತಿಳಿಸಿದ್ದಾನೆ.
ಹೀಗೆ ಹೇಳುತ್ತಿದ್ದಂತೆ ಪ್ರಯಾಣಿಕ ಕೋಪಗೊಂಡು ಬಸ್ಸಿನಿಂದ ಇಳಿದು ಬಸ್ಸಿಗೆ ಅಡ್ಡಲಾಗಿ ಮಲಗಿದ್ದಾನೆ.
ಇದರಿಂದಾಗಿ ಕೆಲಹೊತ್ತು ಟ್ರಾಫಿಕ್ ಜಾಮ್’ಗೆ ಕೂಡಾ ಕಾರಣವಾಯಿತು. ಬಳಿಕ ಸ್ಥಳೀಯರು ಬುದ್ದಿ ಹೇಳಿ ಬಸ್ಸನ್ನು ಹತ್ತಿಸಿ ಕಳಿಸಿದ್ದಾರೆ.
ಸದ್ಯ ಈ ವಿಡಿಯೋವನ್ನು ಸಾರ್ವಜನಿಕರು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿದೆ.