Uncategorized

ಅಕ್ರಮ ಮರಳು ಮಾಫಿಯಾ..!! (ಭಾಗ-3) ಮರಳಿಗೆ ಖಾಕಿ ಕಂಗಾವಲು???

ಹು-ಧಾ ಮಹಾನಗರದಲ್ಲಿ ಅಕ್ರಮ ಮರಳು ಮಾಫಿಯಾ ವಿಪರೀತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಂತೆ ಎಷ್ಟೇ ತಿಳಿಸಲಾಗುತ್ತಿದ್ದರು ಸಹ ಯಾರೊಬ್ಬರೂ ಖ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಅಕ್ರಮ ಮರಳು ಮಾಫಿಯಾ ಹಿಂದೆ ಅಧಿಕಾರಿಗಳ ಕೈವಾಡದ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದು, ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.

ದೂರದ ಗಂಗಾವತಿ, ಹಾವೇರಿ, ರೋಣ, ಬಾದಾಮಿ ಜಿಲ್ಲೆಗಳಿಂದ ಹು-ಧಾ ನಗರಕ್ಕೆ ಮರಳು ಪ್ರತಿನಿತ್ಯ ಟಿಪ್ಪರ್ ಲಾರಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ರಾತ್ರಿ-ಹಗಲು ಎನ್ನದೇ ಸಾಗಾಟವಾಗುತ್ತಿದೆ.

ಹೀಗೆ ಸಾಗಾಟ ಮಾಡುವ ಮರಳು ದಂಧೆಕೋರರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಮರಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗೆ ನಡೆಸುವ ದಂಧೆಗೆ ವಾಣಿಜ್ಯ ನಗರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಕ್ಷಕರೇ ಅಕ್ರಮಕ್ಕೆ ರಕ್ಷಣೆ ನೀಡುತ್ತಿದ್ದಾರೆಂಬ ಗಂಭೀರವಾದ ಆರೋಪ ಕೇಳಿಬಂದಿದೆ.

ಮೊನ್ನೆ ನಮ್ಮ Etv24×7 ಅಕ್ರಮ ಮರಳು ಸಾಗಿಸುತ್ತಿದ್ದ ಟ್ರಕ ಸಮೇತ ಅಧಿಕಾರಿಗಳಿಗೆ ಒಪ್ಪಿಸಿದ್ದು ತಿಳಿದು ಇಗಾ ಮರಳು ಸಾಗಟವನ್ನು ಬೇರೆ ಬೇರೆ ದಾರಿಯಿಂದ ಸಾಗಿಸುತ್ತಿರೋದು ನೋಡಿದರೆ ಗೊತ್ತಾಗುತ್ತೆ ಇದರಲ್ಲಿ ನಾಲ್ಕು ದಿಕ್ಕಿನ ಅಧಿಕಾರಿಗಳು ಸಾತ್ ನೀಡುತ್ತಿದ್ದಾರಾ ಅಂತಾ ಸಾರ್ವಜನಿಕರು ಸಂಶಯ ವ್ಯೆಕ್ತಿಪಡಿಸುತ್ತಿದ್ದಾರೆ.

ಅದಾಗ್ಯೂ ಕೂಡಾ ನಗರದ ಹೆಬ್ಬಾಗಿಲು ಹಡಗಲಿಯ ದಾರಿಯನ್ನು ದಾಟಿ ನಗರಕ್ಕೆ ಆಗಮಿಸುವ ಅಕ್ರಮ ಮರಳಿಗೆ ದ್ವಾರ ಪಾಲಕರಾಗಿ ಹುಬ್ಬಳಿಯು ಆನೆಯೊಂದಿಗೆ ಮೈತ್ರಿಮಾಡಿಕೊಂಡು ಬೇಕಾಬಿಟ್ಟಿಯಾಗಿ ದಂಧೆ ನಡೆಸುತ್ತಿದ್ದರು ಸಹ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾನಮೌನಕ್ಕೆ ಜಾರಿಯಾಗಿದ್ದಾರೆ.

ಅಷ್ಟೇ ಅಲ್ಲದೇ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ ಎನಿಸಿರುವ ಸಂಚಾರಿ ಡಿಸಿಪಿ ರವೀಶ್ ಸಿ.ಆರ್ ಕೂಡಾ ಇಷ್ಟೆಲ್ಲಾ ನಡೆಯುತ್ತಿದ್ದರೂ ಗಪ್ಪಚುಪ್ಪ ಇರುವುದನ್ನು ನೋಡಿದ್ರೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮೊದಲೇ ಅವಳಿನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲಿ ರಸ್ತೆಗಳೆಲ್ಲ ಧೂಳುಮಯ ಆಗಿವೆ. ಹೀಗಿರುವಾಗ ಅಕ್ರಮ ಮರಳು ಟಿಪ್ಪರ್ ಗಳ ಹಾವಳಿ ಕೂಡಾ ಜನರ ಜೀವವನ್ನು ಹಿಂಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೇ ಗಮನ ಹರಿಸಿ ಇತಿಶ್ರೀ ಹಾಡುವ ಕಾರ್ಯ ಮಾಡಬೇಕಿದೆ.

ಮುಂದಿನ ಸಂಚಿಕೆಯಲ್ಲಿ ಅವರ ಹೆಸರು ಹಾಗೂ ಅವರ ವಿಡಿಯೋ ಸಮೇತ Etv24×7 ನಲ್ಲಿ ನಿರೀಕ್ಷಿಸಿ………

Leave a Reply

Your email address will not be published. Required fields are marked *

error: Content is protected !!