ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಹಾಗು ಆತನ ಸಹಚರರಿಂದ ಬಿಜೆಪಿ ಸದಸ್ಯ ಸಹಿತ ವಯೋ ವೃದ್ದರ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ 72 ಸದಸ್ಯ ಸುಮಿತ್ರಾ ಗುಂಜಾಳ ಹಾಗೂ ಮನೆ ಸದಸ್ಯರ ಮೇಲೆ ಕ್ಷುಲಕ ಕಾರಣಕ್ಕೆ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪ ಗೌಡರ ಹಾಗೂ ಆತನ ಮಗನ ಸಹಿತ ಆತನ ಸಹಚರ ಜೊತೆ ವಯೋ ವೃದ್ಧರು ಅನ್ನದೆ ಮನಸ್ಸೂ ಇಚ್ಛೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಳೆ ಹುಬ್ಬಳ್ಳಿಯ ಜಂಗ್ಲಿ ಪೇಟೆಯ ವಿಠ್ಠಲ್ ಹರಿ ಮಂದಿರ ಹತ್ತಿರ ನಡೆದಿದೆ
ಇದು ಯಾವುದೋ ಜಮೀನಿಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದ್ದು ಲೋಕೇಶ್ ಗುಂಜಾಳ ಅವರು ಗದಿಗೆಪ್ಪ ಗೌಡರ ಹೆಂಡತಿಗೆ ಆ ಹೋಲವನ್ನು ಮಾರಿದ್ದು ಈಗ ಆತನಿಗೂ ಆತನ ಹೆಂಡತಿಯ ನಡುವೆ ಕುಟುಂಬ ಕಲಹ ಉಂಟಾಗಿದ್ದು ಇಂದು ಏಕಾಏಕಿ ತನ್ನ ಸಹಚರ ಜೊತೆ ನಮ್ಮ ಮನೆಗೆ ಬಂದು 16 ಎಕರೆ ಹಳಿಯಾಳ ಹದ್ದಿನಲ್ಲಿ ಬರುವ ಹೊಲ ತನಗೆ ಬೇಕು ಇಲ್ಲದಿದ್ದರೆ ಶೂಟ್ ಮಾಡುವುದಾಗಿ ಹೆದರಿಸಿ ತಮ್ಮ ಹಾಗು ಕುಟುಂಬ ಸದಸ್ಯರ ಮೆಲೆ ಹಲ್ಲೆ ಮಾಡಿದ್ದಾನೆ ಎಂದು ಬಿಜೆಪಿ 72ನೇ ವಾರ್ಡಿನ ಸದಸ್ಯ ಸುಮಿತ್ರಾ ಗುಂಜಾಳ ಆರೋಪಿಸಿದ್ದಾರೆ
ಇನ್ನು ಹಲ್ಲೆಗೆ ಒಳಗಾದ ಎಲ್ಲರೂ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಈ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ
