ನೋಡಿ ಪುಡಿ ರೌಡಿಗಳ ಆವಾಜ್ ಹೇಗಿದೆ… ಆಡಿಯೋ ವಿಡಿಯೋ ಇದೆ ನೋಡಿ…

ಹುಬ್ಬಳ್ಳಿಯಲ್ಲಿ ನಿಲ್ಲದ ಪುಡಿರೌಢಿಗಳ ಹಾವಳಿ. ಹೌದು ಇತ್ತಿಚೆಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಡಿ ರೌಢಿಗಳ ಹಾವಳಿ ಹೆಚ್ಚಾಗಿದ್ದು, ಕ್ಷುಲ್ಲಕ ವಿಚಾರಕ್ಕೆ, ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲವೇ ಇನ್ನಿತರ ಕಾರಣಗಳಿಗೆ ಪುಡಿರೌಢಿಗಳು ಅಮಾಯಕ ಜನರ ಮೇಲೆ ತಮ್ಮ ದರ್ಪವನ್ನು ತೋರಿಸುತ್ತಿದ್ದಾರೆ.
ಅದರಂತೆ ಇಂದು ಸಹ ಗೊಪ್ಪನಕೊಪ್ಪದ ಮೆಟ್ರೋ ಪಾರ್ಕ್ ಹತ್ತಿರ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುವ ಶಂಕರ ಎಂಬಾತನ ಮೇಲೆ ಏಕಾಏಕಿ 8-10 ಪುಡಿರೌಢಿಗಳ ಗುಂಪು ಹಲ್ಲೆ ಮಾಡಿದೆ. ಅಲ್ಲದೇ ಜೀವ ಬೆದರಿಕೆ ಹಾಕಿದೆ.
ಇನ್ನು ಹಲ್ಲೆ ಮಾಡಿದವರನ್ನು ಕಿರಣ ಉರ್ಪ 220 ಮತ್ತು ಗಗನ ಹಾಗೂ ಆತನ 7 ಜನ ಸಹಚರರು ಎಂದು ಗುರುತಿಸಲಾಗಿದೆ. ಇವರು ತಮಗೆ ಪ್ರತಿ ತಿಂಗಳು ಹಪ್ತಾ ನೀಡುವಂತೆ ಕ್ಯಾತೆ ತೆಗೆದಿದ್ದಾರೆ. ಆದರೆ ಇದಕ್ಕೆ ಶಂಕರ ಪ್ರಶ್ನೆ ಮಾಡಿದಕ್ಕೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಇನ್ನೂ ಹಲ್ಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಇತ್ತ ಶಂಕರ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದಂತೆ, ಇತ್ತ ಪುಡಿರೌಢಿಗಳು ಶಂಕರ ಸ್ನೇಹಿತನಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರಂತೆ.
ಈ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪುಡಿರೌಢಿಗಳ ಹಾವಳಿಗೆ ಹುಬ್ಬಳ್ಳಿಯ ಜನತೆ ಬೆಚ್ಚಿಬಿದಿದ್ದಾರೆ. ಇವರ ಮೇಲೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಯಾವ ಕ್ರಮ ಕೈಗೊಳ್ಳತ್ತಾರೆ ಕಾದುನೋಡಬೇಕಿದೆ.