ನಕಲಿ ಪೊಲೀಸರು ಅಂತಾ ಸಾರ್ವಜನಿಕರಿಂದ ಬಿತ್ತು ಗೂಸಾ ಆದರೆ?

ಬಳ್ಳಾರಿ: ನಕಲಿ ಪೊಲೀಸ್ ಎಂದು ಡೆಪ್ಯೂಟಿ ಫಾರೆಸ್ಟ್ ರೇಜರ್ ಗೆ ಸಾರ್ವಜನಿಕರು ಹಲ್ಲೆ ಮಾಡಿರುವಂತಹ ಘಟನೆ ನಗರದ ವಿಮ್ಸ್ ಆಸ್ಪತ್ರೆ ಸಮೀಪ ರೇಣುಕಾ ಹೊಟೆಲ್ ಬಳಿ ನಡೆದಿದೆ. ಡೆಪ್ಯೂಟಿ ಫಾರೆಸ್ಟ ರೇಂಜರ್ ಕೆಂಚಪ್ಪಗೆ ಸಾರ್ವಜನಿಕರಿಂದ ಗೂಸಾ ನೀಡಲಾಗಿದೆ. ಪೋಲಿಸ್ ಸೋಗಿನಲ್ಲಿ ಹೋಟೆಲ್ಗಳಿಗೆ ಹೋಗಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ದರ್ಪ ತೋರಿದ್ದಾರೆನ್ನಲಾಗಿದೆ.
ಪೋಲೀಸ್ ಅಂತ ಹೇಳಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ವಸೂಲಿ ಮಾಡುತ್ತಿದ್ದರಂತೆ. ಹೋಟೆಲ್ ಅಂಗಡಿಗಳಿಂದ ಹಾಗೂ ಬೈಕ್ ನಿಲ್ಲಿಸಿ ಡೆಪ್ಯೂಟಿ ಫಾರೆಸ್ಟ್ ರೇಂಜರ್ ಹಣ ವಸೂಲಿ ಮಾಡುತ್ತಿದ್ದರೆನ್ನಲಾಗಿದೆ. ಹೋಟೆಲ್ ಕ್ಯಾಶಿಯರ್ ಬಳಿ ಕೆಂಚಪ್ಪ ಹಣ ಕೇಳಿದ್ದಾರೆ.

ತ್ರಿಬಲ್ ಸ್ಟಾರ್ ಹಾಕಿಕೊಂಡಿದ್ದರಿಂದ ಹೊಟೆಲ್ ಸಿಬ್ಬಂದಿಗೆ ಅನುಮಾನ ಬಂದು ಐಡಿ ಕೇಳಿದ್ದಾರೆ. ಐಡಿ ಕೂಡಾ ಡುಪ್ಲಿಕ್ಯೇಟ್ ಇದ್ದುದ್ದರಿಂದ ಅನುಮಾನಗೊಂಡು ಬಳಿಕ ಕೌಲ್ ಬಜಾರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಬರೊದ್ರೊಳಗೆ ಕೆಂಚಪ್ಪಗೆ ಸಾರ್ವಜನಿಕರಿಂದ ಹಲ್ಲೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿದ ಬಳಿಕ ಡೆಪ್ಯೂಟಿ ಫಾರೆಸ್ಟ ರೇಜರ್ ಎಂದು ಗೊತ್ತಾಗಿದೆ.