ಮಾನವೀಯತೆ ತಲೆ ತಗ್ಗಿಸುವಂತೆ ಮಾಡಿದ ಹುಬ್ಬಳ್ಳಿಯ ಘಟನೆ! 5 ವರ್ಷದ ಕಂದಮ್ಮಳ ಮೇಲೆ ಅತ್ಯಾಚಾರ, ಕೊಲೆ….

ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ದುರುಳನೋರ್ವ ಅತ್ಯಾಚಾರವೆಸಗಿ, ಕೊಲೆ ಮಾಡಲು ಪ್ರಯತ್ನ ನಡೆಸಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ಇಂದು ನಡೆದಿದೆ.
ಆರೋಪಿ ಬಿಹಾರ ಮೂಲದ ಸೈಕೋಪಾತ್ ಆಗಿದ್ದು, ಬಾಲಕಿಯನ್ನು ಶೆಡ್’ಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ತಿಳಿದುಬಂದಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಹತ್ತಿರವಿರುವ ಶೆಡ್’ಗೆ ಕರೆದೊಯ್ದ ದುರುಳ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಮುಂದಾಗಿದ್ದಾನೆ. ಆದರೆ ಬಾಲಕಿಯ ನರಳಾಟ ಜೋರಾದ ಕಾರಣ ಸಾರ್ವಜನಿಕರು ಧ್ವನಿ ಕೇಳಿ ಶೆಡ್ ಬಳಿ ಬಂದಿದ್ದಾರೆ.
ಈ ವೇಳೆ ಜನರು ಬರುತ್ತಿದ್ದನ್ನು ಕಂಡ ಧುರುಳ, ಸಿಕ್ಕಿಬೀಳುವ ಭಯದಲ್ಲಿ ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕ ನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಮೃತ ಬಾಲಕಿಯ ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.ಬುಗಿಲೆದ್ದ ಆಕ್ರೋಶ
ಇನ್ನು ಐದು ವರ್ಷದ ಬಾಲಕಿ ಮೇಲೆ ನಡೆದಿರುವ ದಾರುಣ ಅತ್ಯಾಚಾರ ಮತ್ತು ಕೊಲೆ ಯತ್ನ ಘಟನೆಯು, ನಗರದಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಎಳೆಯ ಕಂದಮ್ಮಳ ಮೇಲೆ ಇಂತಹ ನೀಚ ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎಲ್ಲೆಡೆಯಿಂದ ಒತ್ತಾಯ ಕೇಳಿಬಂದಿದೆ. ಅಲ್ಲದೇ ಅಶೋಕ ನಗರದ ಠಾಣೆ ಮುಂಭಾಗದಲ್ಲಿ ಸಾರ್ವಜನಿಕರು ಆರೋಪಿಯನ್ನು ತಮಗೆ ಒಪ್ಪಿಸಲು ಆಗ್ರಹಿಸಿದ್ದಾರೆ.