ಅಪ್ರಾಪ್ತರ ಜಗಳ… ಕೊಲೆಯಲ್ಲಿ ಅಂತ್ಯ……ಮದುವೆ ಮನೆ ಇಗಾ ಸ್ಮಶಾನ ಮೌನ..!!!!!!

ಕ್ಷುಲ್ಲಕ ಕಾರಣಕ್ಕೆ ಬಾಲಕನೊರ್ವನಿಗೆ ಚಾಕು ಇರಿದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಕಮರಿಪೇಟೆಯ ಜೀ ಅಡ್ಡಾದಲ್ಲಿ ಈ ಒಂದು ಘಟನೆ ನಡೆದಿದ್ದು, ಚೇತನ ರಕ್ಕಸಗಿ ಎಂಬಾತ ಚಾಕು ಇರಿತಕ್ಕೆ ಸಾವನ್ನಪ್ಪಿದ್ದಾನೆ.
ಇನ್ನು ಸಾಯಿ ಹಬೀಬ್ ಎಂಬಾತ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಎಂದಿನಂತೆ ಚೇತನ ಮನೆಯಲ್ಲಿ ಚಹ ಕುಡಿದು, ಮೊದಲೇ ಮನೆಯಲ್ಲಿ ಸಂಬಂಧಿಕರ ಮದುವೆ ಹಿನ್ನೆಲೆಯಲ್ಲಿ ತನಗೆ ಹೊಸ ಬಟ್ಟೆ ತರುವಂತೆ ತನ್ನ ತಾಯಿಗೆ ತಿಳಿಸಿ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಾಯಿ ಹಬೀಬ್ ಜೊತೆಗೆ ಜಗಳ ಏರ್ಪಟಿದೆ, ಈ ವೇಳೆ ಸಾಯಿ ಹಬೀಬ್ ರೇಡಿಯಂ ಕಟರ್ ದಿಂದ ಇರಿದಿದ್ದಾನೆ. ಪರಿಣಾಮ ಚೇತನ್ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ಈ ಘಟನೆ ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.