ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ… ಮಹಿಳೆಯರು, ಪುರುಷರು ರೆಡ್ ಹ್ಯಾಂಡ್ ಆಗಿ ವಶಕ್ಕೆ

ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಲಾಡ್ಜ್’ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಐದು ಜನ ಮಹಿಳೆಯರು ಹಾಗೂ ಏಳು ಜನ ಪುರುಷರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಮೇರೆಗೆ ಸ್ಥಳೀಯ ಸಿಸಿಬಿ ಪೊಲೀಸರು ಏಕಾಏಕಿ ಹುಬ್ಬಳ್ಳಿಯ ಹೊಸೂರಿನಲ್ಲಿರುವ ಪಾರಿಜಾತ ಲಾಡ್ಜ್ ಮೇಲೆ ದಾಳಿ ಮಾಡಿದ್ದು, ದಾಳಿ ಕಾಲಕ್ಕೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇನ್ನು ಲಾಡ್ಜ್’ನಲ್ಲಿ ವೇಶ್ಯಾವಾಟಿಕೆ ಕೃತ್ಯ ಬೆಳಕಿಗೆ ಬರಬಾರದೆಂದು ಲಾಡ್ಜ್ ಒಂದರ ಶೌಚಾಲಯ ಪಕ್ಕ ಒಂದು ಗುಪ್ತ ಬಾಗಿಲು ಮಾಡಲಾಗಿತ್ತು. ಏನಾದರೂ ಲಾಡ್ಜ್ ವೇಳೆ ದಾಳಿಯಾದಲ್ಲಿ ಈ ಬಾಗಿಲು ಮೂಲಕ ಪರಾರಿಯಾಗಲು ಈ ಬಾಗಿಲು ಬಳಸಲಾಗುತ್ತಿತ್ತು ಎಂದು ದಾಳಿ ಕಾಲಕ್ಕೆ ತಿಳಿದುಬಂದಿದೆ.