ಕೈ ಪಕ್ಷದ ಪಾಲಿಕೆಯ ಸದಸ್ಯ ಸೇರಿ 10 ಜನರ ಬಂಧನ – ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ಧಾರವಾಡದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ ನಗರದ ಬೂಸಪ್ಪ ಚೌಕ್ ನಲ್ಲಿ ಬಿಂದಾಸ್ ಆಗಿ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ದಾಳಿ ಮಾಡಿ ಹತ್ತು ಜನರನ್ನು ಬಂಧನ ಮಾಡಿದ್ದಾರೆ. ಮೊದಲ ಬಾರಿಗೆ ಧಾರವಾಡದ ವಾರ್ಡ್ 17 ರಿಂದ ಕಾಂಗ್ರೇಸ್ ಪಕ್ಷದಿಂದ ಪಾಲಿಕೆಯ ಸದಸ್ಯರಾಗಿದ್ದ ಗಣೇಶ ಮುಧೋಳ ಸೇರಿದಂತೆ ಒಟ್ಟು 10 ಜನರನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. ಸಿಸಿಬಿ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೇತ್ರತ್ವದಲ್ಲಿ ನಡೆದ ಈ ಒಂದು ಕಾರ್ಯಾಚರಣೆಯಲ್ಲಿ ಹತ್ತು ಜನರನ್ನು ಬಂಧನ ಮಾಡಿ ಬಂಧಿತರಿಂದ 1 ಲಕ್ಷ 2 ಸಾವಿರ ರೂಪಾಯಿ ಗಳನ್ನ ವಶಕ್ಕೆ ತಗೆದುಕೊಳ್ಳಲಾಗಿದ್ದು ಇನ್ನೂ ಸಧ್ಯ ಈ ಕುರಿತಂತೆ ನಗರದ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು

ಸಿಸಿಬಿ ಪೊಲೀಸರ ದೂರಿನ ಹಿನ್ನಲೆಯಲ್ಲಿ ಶಹರ ಠಾಣೆ ಪೊಲೀಸರು ಪ್ರಕರಣವನ್ನು ತಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಒಟ್ಟಾರೆ ಜನಪ್ರತಿನಿಧಿಗಳಾದವರು ಜವಾಬ್ದಾರಿಯುತವಾದ ಸ್ಥಾನದಲ್ಲಿ ಜನರ ಸೇವೆಯನ್ನು ಮಾಡಬೇಕಾದವರೇ ಹೀಗೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬೊದಕ್ಕೆ ಅವರೇ ಉತ್ತರಿಸಬೇಕು.
