ಸರ್ಕಾರಿ 1000 ಶಾಲಾ ವಿದ್ಯಾರ್ಥಿಗಳ ಓದಿಗೆ ನೇರವಾದ ಶ್ರೀಗಂಧ ಶೇಟ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಸದಾ ವ್ಯಾಪಾರ ವಹಿವಾಟು ಎಂದುಕೊಂಡು ಅದರಲ್ಲಿಯೇ ತಮ್ಮನ್ನು ತಾವು ತೋಡಿಸಿಕೊಳ್ಳದ ಹುಬ್ಬಳ್ಳಿಯ ಕೆಜಿಪಿ ಗ್ರೂಪ್ ಹತ್ತಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಸಮಾಜಮುಖಿಯಾಗಿ ಮಾಡ್ತಾ ಇದೆ ಎನ್ನೊದಕ್ಕೆ ಶ್ರೀಗಂಧ ಶೇಟ್ ಮಾಡುತ್ತಿರುವ ಹತ್ತಾರು ಕೆಲಸ ಕಾರ್ಯಗಳೆ ಸಾಕ್ಷಿ.

ಹೌದು ಈಗಾಗಲೇ ಒಂದಿಲ್ಲೊಂದು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಈ ಒಂದು ಗ್ರೂಪ್ ಸಧ್ಯ ಮತ್ತೊಂದು ಮಹಾನ್ ಕೆಲಸವನ್ನು ಮಾಡಿದೆ ಹೌದು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಮಾಡುವ ಮೂಲಕ ಈ ಒಂದು ಕೆಜಿಪಿ ಗ್ರೂಪ್ ಮತ್ತೊಂದು ಸಮಾಜ ಮುಖಿಯಾದ ಕಾರ್ಯವನ್ನು ಮಾಡಿದೆ.

ಕೆಜಿಪಿ ಫೌಂಡೇಶನ್ ಹಾಗೂ ಕೆಜಿಪಿ ಗ್ರೂಪ್ ಆಫ್ ಕಂಪನೀಸ್ ಈ ಒಂದು ಸಂಘಟನೆಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ನಡೆಯಿತು.ಶ್ರೀಗಂಧ ಗಣೇಶ ಶೇಟ್ ಅಧ್ಯಕ್ಷರು ಕೆಜಿಪಿ ಫೌಂಡೇಶನ್ ಹಾಗೂ ಮಾಲೀಕರು ಕೆಜಿಪಿ ಗ್ರೂಪ್ ಆಫ್ ಕಂಪನೀಸ್ ಅವರ ನೇತೃತ್ವದಲ್ಲಿ ಶಾಲಾ ಬೆಂಬಲ ಕಾರ್ಯಕ್ರಮವನ್ನು ಆರಂಭ ಮಾಡಲಾಗಿದ್ದು ಮೊದಲ ಹಂತದಲ್ಲಿ 9 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ 1000 ಬ್ಯಾಗ್ ಗಳನ್ನು ವಿತರಣೆ ಮಾಡಲಾಯಿತು.

ಇದರೊಂದಿಗೆ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಮತ್ತು ಇಲ್ಲಿ ಕಲಿಯುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈಜೋಡಿಸಲಾಯಿತು.ನೇಕಾರ ಕಾಲೋನಿಯ ಸರ್ಕಾರಿ ಶಾಲೆ, ಹಳೆ ಹುಬ್ಬಳ್ಳಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ,ಸುಣ್ಣದ ಬಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ರಾಯಪುರದ ಸರ್ಕಾರಿ ಶಾಲೆ ಸೇರಿದಂತೆ ಒಟ್ಟು 10 ಶಾಲೆಗಳಿಗೆ ತೆರಳಿ ಉಚಿತವಾಗಿ ಮಕ್ಕಳಿಗೆ ಬ್ಯಾಗ್ ನ್ನು ನೀಡಲಾಯಿತು ಇದರೊಂದಿಗೆ ಕೆಜಿಪಿ ಗ್ರೂಪ್ ಮತ್ತೊಂದು ಸಮಾಜಮುಖಿಯಾದ ಕೆಲಸವನ್ನು ಮಾಡುವ ಮೂಲಕ ಮಾದರಿಯಾಗಿದೆ.

ಗಣೇಶ ಶೇಟ್ ಅವರ ಮಾರ್ಗದರ್ಶನದಲ್ಲಿ ಶ್ರೀಗಂಧ ಶೇಟ್ ಅವರು ಈ ಒಂದು ಕಾರ್ಯವನ್ನು ಮಾಡಿದ್ದು ಇವರೊಂದಿಗೆ ಸಂಘಟನೆಯ ಮುಖಂಡರು ಸೇರಿದಂತೆ ಕಾರ್ಯಕರ್ತರು ಆಪ್ತರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.