೭೫ ನೇ ಸ್ವಾತಂತ್ರೋತ್ಸವದ ಅಂಗವಾಗಿ ೩೦೦ ಕ್ಕೊ ಹೆಚ್ಚು ಮಾಜಿ ಸೈನಿಕರಿಗೆ ಸನ್ಮಾನಿಸಿದ ರೈಲ್ವೆ ಕಾರ್ಮಿಕ ಸಂಘಟನೆ

ಹುಬ್ಬಳ್ಳಿಯಲ್ಲಿ SWRMU ರೈಲ್ವೆ ಕಾರ್ಮಿಕರ ಸಂಘದ ವತಿಯಿಂದ ೭೫ ನೇ ಸ್ವಾತಂತ್ರ ದ ಅಮೃತ ಮಹೋತ್ಸವ ದ ಅಂಗವಾಗಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ವಿಭಾಗದಲ್ಲಿ ವಿವಿಧ ಶಾಖೆಯಲ್ಲಿ ಸುಮಾರು ೩೦೦ಕ್ಕೊ ಹೆಚ್ಚು ಮಾಜಿ ಸೈನಿಕರು ಕೆಲಸ ಮಾಡುತ್ತಿದ್ದು .
ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು. ಇನ್ನು ಗದಗ ರಸ್ತೆ ಉದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರದ ಬ್ಯಾನರ್ ಗಳನ್ನು ಅಳವಡಿಸಿದ್ದು ಕಂಡು ಬಂದಿತು ಇನ್ನು ಈ ಒಂದು ಕಾರ್ಯಕ್ರಮವನ್ನು ಸೌಥ್ ವೆಸ್ಟರ್ನ್ ರೇಲ್ವೆ ಮಜ್ದೂರ ಯೂನಿಯನ್ ವತ್ತಿಯಿಂದ ಎ ಎಮ್ ಡಿಕ್ರೂಜ ಅವರ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು ಇನ್ನು ಈ ಕಾರ್ಯಕ್ರಮದಲ್ಲಿ ಕಾ ವೆಂಕಟೇಶ. ಕಾ ಜಯಲಕ್ಷ್ಮಿ. ಜಾಕೀರ ಸನದಿ. ಮುರಗನ.ಜಾಕೋಬ್ ಅಶೋಕ ಕುಮಾರ. ಚಾರಖಾನಿ ಸಹಿತ ಸಾವಿರಾರು ಸಂಖ್ಯೆಯಲ್ಲಿ ರೈಲ್ವೆ ಕಾರ್ಮಿಕರು ಉಪಸ್ಥಿತರಿದ್ದರು