Uncategorized

ರಾಯಣ್ಣ ಅಭಿಮಾನಿಗಳಿಂದ ಆಗಸ್ಟ್ 7 ರಂದು ಬೃಹತ್ ರಕ್ತದಾನ ಶಿಬಿರ

ಹುಬ್ಬಳ್ಳಿ : ಆಗಸ್ಟ್ 15 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತೋತ್ಸವ ಅಂಗವಾಗಿ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ, ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹಾಗೂ ರೋಟರಿ ರಕ್ತ ಭಂಡಾರ ಇವರ ಸಹಯೋಗದೊಂದಿಗೆ ಅಗಷ್ಟ್ 7 ಭಾನುವಾರದಂದು ಮುಂಜಾನೆ 11 ಗಂಟೆಗೆ ನಗರದ ಮೂರು ಸಾವಿರ ಮಠದ ಸಭಾಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಗೋಕಾಕ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗಸ್ಟ್ 7 ರಂದು ಮುಂಜಾನೆಯಿಂದ ಶಿಬಿರ ಆಯೋಜಿಸಲಾಗಿದೆ ಎಂದರು.
ರಕ್ತದಾನ ದಾನವಾಗಿದ್ದು, ಹೀಗಾಗಿ ಆರೋಗ್ಯವಂತ 18 ವರ್ಷದ ಮೇಲ್ಪಟ್ಟ ಯುವಕ ಹಾಗೂ ಯುವತಿಯರು ಪ್ರತಿ ಮೂರು ತಿಂಗಳಿಗೊಮ್ಮೆ ಅಂದರೇ ವರ್ಷಕ್ಕೆ 4 ಬಾರಿ ರಕ್ತದಾನ ಮಾಡಬಹುದಾಗಿದೆ. ಹೀಗಾಗಿ ರಕ್ತದಾನ ಮಾಡುವ ಮೂಲಕ ಜೀವವನ್ನು ಉಳಿಸೋಣ ಎಂದರು.

ಈ ರಕ್ತದಾನ ಶಿಬಿರಕ್ಕೆ ರಾಯಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಕ್ಕೆ ಆಗಮಿಸಬೇಕು ಎಂದು ಕೋರಿದರು. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿರೇಶ ಗೊಂದಿ, ರಾಮಚಂದ್ರ, ರಾಜು, ಗಣೇಶ ಅಂಬಿಗೇರ, ಸಚಿನ್ ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!