ಮಹಿಳೆಯ ಮೇಲೆ ಯುವಕನಿಂದ ಹಲ್ಲೆ. ಆರೋಪಿಯನ್ನು ಬಂಧಿಸಿದ ಹಳೆ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಮಹಿಳೆಯೊಬ್ಬಳ ಮೇಲೆ ಯುವಕನೊರ್ವ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ನಡೆದಿದೆ.

ಪಲ್ಲವಿ (40) ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದು, ಅಭಿಷೇಕ (23) ಹಲ್ಲೆ ಮಾಡಿದವನಾಗಿದ್ದಾನೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಹಲ್ಲೆಗೆ ಒಳಗಾದ ಮಹಿಳೆಯನ್ನು ಸುರಕ್ಷಿತವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಈಗಾಗಲೇ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಹಲ್ಲೆ ನಡೆಸಿದ ಆರೋಪಿ ಅಭಿಷೇಕ್’ನನ್ನು ಬಂಧಿಸಿದ್ದು, ಯಾವ ಕಾರಣಕ್ಕೆ ಹಲ್ಲೆ ನಡೆಸಿದ್ದಾನೆಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.