Uncategorized

ಹೊರಟ್ಟಿ ಕಾರು ಅಪಘಾತ: ಬೈಕ್ ಸವಾರಿನಿಗೆ ಗಾಯ

IMG_20220807_192458

ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದಾಗ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರ ಕಾರು ಎದುರಿಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಿವಿಬಿ ಕ್ಯಾಂಪಸನಲ್ಲಿ ನಡೆದಿದೆ.

ಸವದತ್ತಿ ‌ಮೂಲದ ಕೆಂಚಪ್ಪ ಎಂಬಾತನೆ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ.
ಅಪಘಾತದಲ್ಲಿ ವಾಹನ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಅರ್ಧ ಗಂಟೆಯಾದರೂ ಘಟನಾ ಸ್ಥಳಕ್ಕೆ ಅಂಬ್ಯುಲೆನ್ಸ್ ಬರಲಿಲ್ಲ. ಗಾಯಗೊಂಡ ವ್ಯೆಕ್ತಿಯನ್ನು ಕಿಂಸಗೆ ವಾಹನದಲ್ಲಿ ಕಳುಹಿಸಿದ ಬಳಿಕ ಹೊರಟ್ಟಿ ಅವರು ಬೇರೆ ವಾಹನ ತರಿಸಿ ಹೊರಟು ಹೋದರು. ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಲಾಗಿದೆ.  ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.

Leave a Reply

Your email address will not be published. Required fields are marked *

error: Content is protected !!