ಹುಬ್ಬಳ್ಳಿಯಲ್ಲಿ ಮಹಿಳೆಯ ಆತ್ಮಹತ್ಯೆ? ಸಾವಿನ ಸುತ್ತ ಅನುಮಾನದ ವಾಸನೆ…. !

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮಹಿಳೆ ಒಬ್ಬಳು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮಾಧುರಿ ದೊಡ್ಡಮನಿ ಎಂಬ ಮಹಿಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎರಡು ವರ್ಷದ ಹಿಂದೆ ಅವಳ ತಂದೆ ಮೃತಪಟ್ಟಿದ್ದು ತಂದೆಗೆ ತುಂಬಾ ಪ್ರೀತಿಯ ಮುದ್ದಿನ ಮಗಳಾಗಿದ್ದಳು. ತಂದೆಯ ಮೃತಪಟ್ಟಿದ್ದರಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪಕ್ಕದ ಮನೆಯಿಂದ ಚಿಕ್ಕ ಟೇಬಲ್ ತಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಆದ್ರೆ ಅವಳ ಸಾವಿನ ಸುತ್ತ ಅನುಮಾನಗಳು ಹುಟ್ಟುತ್ತಿವೆ ಪೊಲೀಸರ ತನಿಖೆಯಿಂದ ಸತ್ಯ ಹೋರ ಬರಬೇಕಿದೆ.