Uncategorized

ಅಕ್ರಮ ಬಯಲಿಗೆಳೆಯುವರ ವಿರುದ್ದ ಶಾಸಕ ಬೆಲ್ಲದ ಸುಳ್ಳು ಕೇಸ ಹಾಕಿಸುತ್ತಿದ್ದಾರೆ . ನಾಗರಾಜ ಗೌರಿ ಆರೋಪ

ಧಾರವಾಡ : ತಮ್ಮ ಅಕ್ರಮಗಳನ್ನು ಬಯಲಿಗೆಳೆಯುವರ ವಿರುದ್ದ ಸುಳ್ಳು ಕೇಸ್ ದಾಖಲಿಸುವ ಮೂಲಕ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅರವಿಂದ ಬೆಲ್ಲದ ತಮ್ಮ ಶೋ ರೂಂ ಅಭಿವೃದ್ಧಿ ಮಾತ್ರ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಸಾರ್ವಜನಿಕ ಆಸ್ತಿ ಪಾಸ್ತಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂದರು.


ಈ ಹಿಂದೆ ಹೋರಾಟ ಮಾಡಿ ಕೆ ಎಂ ಸಿ ಆಕ್ಟ ಪ್ರಕಾರ ಜಲ ಮೂಲ ಜಲ ಹರಿಗಳು ಸರ್ಕಾರದ ಆಸ್ತಿಯಾಗಿದ್ದು. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು. ಆದರೆ, ಶಾಸಕ ಅರವಿಂದ ಬೆಲ್ಲದ ಪ್ರಭಾವದಿಂದ ಯಾರು ಸಹ ಸರಿಯಾಗಿ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದರು.
ಕುಡಿಯುವ ನೀರು ಪೂರೈಸುವ
ಜಲಮಂಡಳಿ ಪೈಪ್ ಲೈನ್ ಎಂ.ಜಿ.ಮೋಟಸ್೯ ಶೋ ರೂಂ ಒಳಗೆ ಹಾಯ್ದು ಹೋಗಿದೆ ಶಾಸಕ ಅರವಿಂದ ಬೆಲ್ಲದ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ ಆದ್ರೆ
ಈಗ ತಮ್ಮ ಮೇಲೆ ಸುಳ್ಳು ಆರೋಪ ಮಾಡಿರುವುದಾಗಿ ಕೇಸು ದಾಖಲಾಗಿದೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಸಾರ್ವಜನಿಕ ಆಸ್ತಿ ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದರು.


ನಗರದ
ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ರಾಣಿ ಚನ್ನಮ್ಮ ಬ್ಲಾಕ ಕಾಂಗ್ರೆಸ ಅಧ್ಯಕ್ಷ ನಾಗರಾಜ ಗೌರಿ ಹಾಗೂ ಕಾರ್ಯಕರ್ತರು ಬಂದು ಅನುಮತಿ ಇಲ್ಲದೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ತಮ್ಮ ಮ್ಯಾನೇಜರ ಮೃತ್ಯುಂಜಯ ಬೂದಿಹಾಳಮಠ ಎಂಬುವವರಿಂದ ಸುಮಾರು 70 ದಿನಗಳ ನಂತರ ದೂರು ದಾಖಲು ಮಾಡಿದ್ದಾರೆ ಎಂದು ಆರೋಪಿಸಿದರು. ಈಡಿ ಐ ಟಿ ಮೂಲಕ ನಮ್ಮ ರಾಜ್ಯ ನಾಯಕರನ್ನು ಹಿಂಶಿಸುತ್ತಿದ್ದಾರೆ ಇಲ್ಲಿ ಲೋಕಲ ಈಡಿ ಪೊಲೀಸ್ ಮೂಲಕ ನನ್ನ ಹಾಗೂ ನಮ್ಮ ಕಾರ್ಯಕರ್ತರನ್ನು ಹಿಂಶಿಸುತ್ತಿದ್ದಾರೆ ಇನ್ನು ಹತ್ತು ಕೇಸ್ ದಾಖಲಾದ್ರು ಕೂಡಾ ಸಾರ್ವಜನಿಕರ ಆಸ್ತಿಯನ್ನು ನುಂಗಿದ ಶಾಸಕರಾದ ಅರವಿಂದ ಬೆಲ್ಲದ ರವರ ಮುಖವಾಡ ಬಯಲು ಮಾಡಿ ಸಾರ್ವಜನಿಕರ ಸ್ವತ್ತನ್ನು ಉಳಿಸುವ ಯತ್ನ ಮಾಡುತ್ತೇನೆ ಶಾಸಕರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯ ಇದು ಯಾವ ನ್ಯಾಯ ಎಂದು ಗುಡುಗಿದರು.
ಅವಳಿನಗರದಲ್ಲಿ ಹಲವಾರು ಸರಕಾರಿ‌ ಮತ್ತು ಸಾರ್ವಜನಿಕ ಸ್ವತ್ತುಗಳನ್ನು ಕಬಳಿಸಿದ್ದಾರೆ. ಅವುಗಳನ್ನು ಬಯಲಿಗೆಳೆದು ಸಾರ್ವಜನಿಕರ ಮುಂದೆ ಇಡುವ ಕೆಲಸ ಮಾಡುತಿದ್ದೆವೆ. ಇದರಿಂದ ಹತಾಶರಾಗಿರುವ ಶಾಸಕರು ನಮ್ಮನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿದ್ದಾರೆ.


ಶಾಸಕರನ್ನು ಹಾಗೂ ಬಿಜೆಪಿ ಯನ್ನು ವಿರೋಧ ಮಾಡುವರು ಬಿಜೆಪಿ‌ ಸೇರಬೇಕು ಅಥವಾ ರಾಜಕಾರಣದಿಂದ ದೂರ ಇರಬೇಕು ಎಂದು‌ ಬಯಸುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಗೌರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಆತ್ಮಾನಂದ ತಳವಾರ. ಸಂದೀಪ ಬಣವಿ ಮಂಜುನಾಥ್ ಕಟ್ಟಿ ಹರೀಶ ಮುಂದಿನಮನಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!