ಆತ್ಮೀಯ ಗೆಳೆಯನಿಂದ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿ ಆದ ಗೆಳೆಯ

ಛೋಟಾ ಮುಂಬಯಿ ಅಂತಾ ಕರೆಸಿ ಕೊಳ್ಳುವ ಹುಬ್ಬಳ್ಳಿಯಲ್ಲಿ ದಿನಾ ಬೆಳಗಾದ್ರೆ ಸಾಕು ಚಾಕು ಇರಿತ ಮಾರಕಾಸ್ತ್ರ ಗಳ ಹಾವಳಿ ಹೆಚ್ಚಾಗಿದ್ದು ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಇಂದು ಹಳೆ ದ್ವೇಷದ ಹಿನ್ನಲ್ಲೆ ಗೆಳೆಯ ತನ್ನ ಜೀವದ ಗೆಳೆಯನಿಗೆ ಚಾಕುವಿನಿಂದ ಇರದ ಘಟನೆ ನಡೆದಿದೆ ಕೆಲವು ವರ್ಷಗಳ ಹಿಂದೆ ರಾಜೇಶ್ ಪಾಂಡುರಂಗ ಕಟಾರೆ ಹಾಗು ಕಾಟ್ಯಾ ಇಬ್ಬರು ಆತ್ಮಿಯ ಗೆಳೆಯರು ಆದ್ರೆ ಏನಾಯಿತು ಗೊತ್ತಿಲ್ಲಾ ಒಂದು ದಿನಾ ರಾಜೇಶ್ ತನ್ನ ಸ್ನೇಹಿತ ಕಾಟ್ಯಾಗೆ ಚಾಕುವಿನಿಂದ ಹಲ್ಲೆ ಮಾಡಿದ್ದು ಆಗ ಇಬ್ಬರು ಸ್ನೇಹಿತರು ದೂರ ಆಗಿದ್ದು ಆದ್ರೆ ಇಂದು ಕಾಟ್ಯಾ ತನ್ನ ಸಹಚರ ಜೊತೆಯಲ್ಲಿ ಸೇರಿಕೊಂಡು ರಾಜೇಶನಿಗೆ ಅವರ ಮನೆಯ ಎದುರೆ ಚಾಕುವಿನಿಂದ ಎದೆಗೆ ಹಾಗು ಹಣೆಯ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದು ಹಣೆಯ ಪಕ್ಕ ನರ ಕಟ್ಟಾಗಿ ತೀವ್ರ ರಕ್ತ ಹರಿದ ಪರಿಣಾಮ ಆತನನ್ನು ಚಿಕಿತ್ಸೆಗಾಗಿ ಕಿಂಸಗೆ ದಾಖಲಿಸಿದ್ದು ಆತನ ಸ್ಥಿತಿ ಚಿಂತಾಜನಕ ವಾಗಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ಕಮರಿಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ ಇನ್ನು ಈ ಹಲ್ಲೆಗೆ ಕಾರಣ ಪೊಲೀಸರ ತನಿಖೆಯಿಂದ ಹೊರ ಬರ ಬೇಕಿದೆ
