ಹುಬ್ಬಳ್ಳಿಯ ಕಸಬಾ ಪೊಲೀಸ ಠಾಣೆಯಲ್ಲಿ ಕಳ್ಳ ಪೊಲೀಸ ಆಟ

ಕಳ್ಳ ಪೊಲೀಸ್ ಆಟ
ಇಂತಹದ್ದೊಂದು ಘಟನೆಗೆ ಸಾಕ್ಷಿಯಾಗಿದೆ ಹುಬ್ಬಳ್ಳಿ ಕ ಸಬಾ ಪೇಟೆ ಪೊಲೀಸ್ ಠಾಣೆ..
ಕಳೆದ 11 ರಂದು ಬ್ಯಾಟರಿ ಕಳ್ಳತನ ಆರೋಪದಡಿ ಕಳ್ಳನನ್ನ ಪೊಲೀಸರು ಬಂಧಿಸಿದ್ರು.
12 ಬ್ಯಾಟರಿ ಹಾಗೂ 40 ಕೆಜಿ ಕಾಪರ್ ಕದ್ದಿದ್ದ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡಿದ್ರು. ಗಬ್ಬುರ ರಸ್ತೆಯ ಹೈವೆ ಪಕ್ಕದ ಒಂದು ಗ್ಯಾರೇಜ್ ದಿಂದ 12 ಬ್ಯಾಟರಿ ಹಾಗು 40 ಕೆಜಿ ಕಾಪರ ಕಳ್ಳತನ ಮಾಡಿದ್ದ ಆತನನ್ನ ಪೊಲೀಸರು ಕೆಲವೇ ಗಂಟೆಗಳಲ್ಲಿ ಅರೆಸ್ಟ್ ಮಾಡಿದ್ರು.ಆದ್ರೆ ಆತ ಬಂದಷ್ಟೆ ವೇಗವಾಗಿ ಠಾಣೆಯಿಂದ ಹೊರಹೋಗಿದ್ದಾನೆ..ಕಳ್ಳನನ್ನ ಪೊಲೀಸರು ಅರೆಸ್ಟ್ ಮಾಡಿದಾಗ ಎಲ್ಲ ಸಾರ್ವಜನಿಕರು ಭೇಷ್ ಬೇಷ್ ಎಂದಿದ್ರು.ಆದ್ರೆ ಠಾಣೆಗೆ ಬಂದ ಕೆಲವೇ ಗಂಟೆಗಳಲ್ಲಿ ಕಸಬಾ ಪೇಟೆ ಪೊಲೀಸರು ಆತನನ್ನ ಬಿಡುಗಡೆ ಮಾಡಿದ್ದಾರೆ.ಅದು ಹಾಗೆ ಅಲ್ಲ ಬ್ಯಾಟರಿ ಕಳ್ಳನ ಬಳಿ ಗರಿ ಗರಿ ನೋಟು ಪಡೆದ ಖಾಕಿ ಆತನನ್ನ ಬಂದಷ್ಟೆ ವೇಗವಾಗಿ ವಾಪಸ್ ಕಳಿಸದ್ದಾರಂತೆ..

12 ಬ್ಯಾಟರಿ ಕಳ್ಳತನ ಮಾಡಿ ಮಾಡಿ ಕಾರವಾರ ರಸ್ತೆಯ ಗಣಪತಿಯ ದೇವಸ್ಥಾನದ ಮುಂದೆ ಇರುವ ವಿಜಯ ಸ್ಕ್ರ್ಯಾಪ ಎಂಬುವವರಿಗೆ ಮಂಜು ಸುಕಂಪ್ಪಾ .ಮಂಜು ಹುಲಿಗೆಪ್ಪಾ ಗುಜನೂರ. ರವಿ ಬೆಂಗೇರಿ .ಈ ಮೂವರು ಕಳ್ಳತನ ಮಾಡಿದ್ದ ಬ್ಯಾಟರಿ ಹಾಗು ಕಾಪರ ವೈರ ಮಾರಿದ್ದು ಇವರು ಮೂಲತಃ ಹುಬ್ಬಳ್ಳಿಯ ದುರ್ಗಾ ಶಕ್ತಿ ಕಾಲೋನಿಯ ತಿಮ್ಮಸಾಗರ ರೋಡ ನಿವಾಸಿಗಳು ಇವರನ್ನು ಬಂದಿಸಿ ವಿಚಾರಣೆ ನಡೆಸಿ ಕಳ್ಳತನ ವಾಗಿದ್ದ ಎಲ್ಲಾ ವಸ್ತುಗಳನ್ನು ಜಪ್ತಿ ಮಾಡಿ ಠಾಣೆಯಲ್ಲಿ ಇದ್ದೆ ಕಳ್ಳ,ಕೆಲವೇ ಕ್ಷಣಗಳಲ್ಲಿ ಹೊರ ಬಂದಿದ್ದು ನೋಡಿ ಹುಬ್ಬಳ್ಳಿ ಮಂದಿ ಶಾಕ್ ಆಗಿದ್ರು.ಕಸಬಾ ಪೇಟೆ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ,ಮತ್ತು ಮೆ………ಟಿ. ಪಾ……ಲು ಪೊಲೀಸರಿಗೆ ಆತ ಭರ್ಜರಿ ಭಕ್ಷೀಸ್ ನೀಡಿ ಹೊರ ಬಂದು ಮತ್ತೆ ನಾನವನಲ್ಲ ನಾನವನಲ್ಲ ಎಂದು ಎದೆ ತಟ್ಕೊಂಡು ಓಡೀದಾನೆ..ಇಂತಹದ್ದೊಂದು ಕಳ್ಳ ಪೊಲೀಸ್ ಆಟದಲ್ಲಿ ಭಾಗಿಯಾದವರ ವಿರುದ್ದ ಪೊಲೀಸ ಆಯುಕ್ತರು ಹಾಗು ಡಿಸಿಪಿ ಅವರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
