Uncategorized

ಕುಂದಗೋಳ‌ ಪೊಲೀಸರ‌ ಪ್ರಾಮಾಣಿಕ ತನಿಖೆ, ಅಪಘಾತದಂತೆ ಸೃಷ್ಟಿಸಲಾಗಿದ್ದ ಕೊಲೆ ಪ್ರಕರಣ ಬಯಲು,ಮೂವರ ಬಂಧನ

ಯುವಕನೋರ್ವನನ್ನು ಕೊಲೆ ಮಾಡಿ, ಅಪಘಾತದ ರೀತಿಯಲ್ಲಿ ಕಾಣುವಂತೆ ತಿರುಚಲಾಗಿದ್ದ ಪ್ರಕರಣವನ್ನು ಭೇದಿಸಿರುವ ಧಾರವಾಡ‌ ಜಿಲ್ಲಾ ಕುಂದಗೋಳ ಠಾಣೆಯ ಇನ್ ಸ್ಪೆಕ್ಟರ್ ಮಾರುತಿ ಗುಳ್ಳಾರಿ‌ ನೇತೃತ್ವದ ಪೊಲೀಸ ತಂಡ ಮೂವರು ಆರೋಪಿಗಳನ್ನು ಎಡೆಮುರಿ‌ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕುಂದಗೋಳ ತಾಲೂಕ ಕಮಡೊಳ್ಳಿ ಹತ್ತಿರ 38 ವರ್ಷದ ಬೈಕ್ ಸವಾರ ಸಿದ್ದು ಈಟಿ ಎಂಬಾತ ಅಪಘಾತದಲ್ಲಿ ಮೃತಪಟ್ಟ ಘಟನೆ ಈಚೆಗೆ ನಡೆದಿತ್ತು. ಮೃತನ ಹೆಂಡತಿಯ ದೂರಿನ ಪ್ರಕಾರ ಪೊಲೀಸರು 304 (A) ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ನಂತರ ಮೃತನ ಸಾವಿನ ಬಗ್ಗೆ ಮೃತನ ಸಂಬಂಧಿಗಳು ಸಂಶಯ ವ್ಯಕ್ತಪಡಿಸಿದ್ದರು. ಆಗ‌ ಪ್ರಕರಣದ ತನಿಖೆಗೆ‌ ಇಳಿದ ಕುಂದಗೋಳ‌ ಠಾಣೆಯ‌ ಇನ್ ಸ್ಪೆಕ್ಟರ್‌ ಮಾರುತಿ‌ ಗುಳ್ಳಾರಿ ನೇತೃತ್ವದ‌ ತಂಡ, ಆಳವಾಗಿ ತನಿಖೆ ಮಾಡಿದಾಗ ಮೃತನ ಹೆಂಡತಿ ಮತ್ತು ಆಕೆಯ ಪ್ರಿಯತಮ ಹಾಗು ಇನ್ನೊಬ್ಬ ಸೇರಿ ಒಂದು ಆಯುಧದಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಶವವನ್ನು ರಸ್ತೆಯ ಬದಿಯ ತೆಗ್ಗಿನಲ್ಲಿ ಬಿಸಾಡಿ, ನಂತರ ಮೃತನ ದ್ವಿಚಕ್ರ ವಾಹನವನ್ನು ಕಲ್ಲಿನಿಂದ ಜಖಂಗೊಳಿಸಿ, ಅವನ ಶವದ ಪಕ್ಕದಲ್ಲಿ ವಾಹನವನ್ನು ತಳ್ಳಿ, ರಸ್ತೆ ಅಪಘಾತ ಎನ್ನುವ ರೀತಿಯಲ್ಲಿ ಸೃಷ್ಠಿಸಿದ್ದನ್ನು ಪತ್ತೆ ಮಾಡಿತ್ತು.


ಅಪಘಾತದ ರೀತಿ ಜಲಜ ಪ್ರಕರಣ ಸೃಷ್ಟಿಸಿರೋದು, ಸಾಕ್ಷಿ ನಾಶಪಡಿಸಿದ್ದರ ಬಗ್ಗೆ ತನಿಖೆಯಿಂದ ತಿಳಿದು ಬಂದಿದ್ದರಿಂದ, 03 ಜನ ಆರೋಪಿತರನ್ನು ದಸ್ತಗಿರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಈ ಪ್ರಕರಣವನ್ನು ಬೇಧಿಸುವಲ್ಲಿ ಧಾರವಾಡ ಜಿಲ್ಲೆಯ ಪೊಲೀಸ ಅಧೀಕ್ಷರಾದ ಲೋಕೇಶ ಜಗಲಾಸರ ಐಪಿಎಸ್, ಪೊಲೀಸ ಉಪಾಧೀಕ್ಷಕರಾದ ಎಮ್. ಬಿ. ಸಂಕದ, ರವರ ಮಾರ್ಗದರ್ಶನದಲ್ಲಿ ಕುಂದಗೋಳ ಪೊಲೀಸ ಠಾಣಿಯ – ಪೊಲೀಸ ಇನ್ಸಪೆಕ್ಟರ ಮಾರುತಿ ಗುಳ್ಳಾರಿ.ಇವರ ನೇತೃತ್ವದಲ್ಲಿ ಮತ್ತು ಸಿಬ್ಬಂದಿಗಳಾದ ಪ್ರಭಾರಿ ಪಿಎಸ್‌ಐ ನರಸಿಂಹರಾಜು ಜೆ. ಡಿ. ಮಡಿವಾಳ ಜೋಡಗೇರಿ, ಬಸವರಾಜ ಶಿರಕೋಳ, ನಾಗರಾಜ ಹೊಸಕೇರಿ, ಪರಮೇಶ ಗೊಂದಿ, ಅಮರೇಶ ಬಳಗಾರ, ಚಂದ್ರು ಬಡಿಗೇರ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!