ಚಾಲಾಕಿ ಅಂತರಾಜ್ಯ ಕಳ್ಳನನ್ನು ಲಾಕ್ ಮಾಡಿ ಜೈಲಿಗಟ್ಟಿದ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು

ಹುಬ್ಬಳ್ಳಿಯ ಕೋಯಿನ್ ರೋಡ್ ಮಲಬಾರ್ ಗೋಲ್ಡ್ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯ ಸೇಲ್ಸಮನ್ ಗಮನ ಬೇರೆ ಕಡೆ ಸೆಳೆದು 1 ಲಕ್ಷ ರೂ ಮೌಲ್ಯದ 14.21 ಗ್ರಾಂ ತೂಕದ ಬಂಗಾರದ ಉಂಗುರವನ್ನು ಕಳ್ಳತನ ಮಾಡಿ ಎಸ್ಕೆಪ್ ಆಗಿದ್ದ ಇನ್ನು ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು, ಈ ಪ್ರಕರಣದ ದಾಖಲಿಸಿಕೊಂಡ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಂ.ಎಂ ತಹಶಿಲ್ದಾರ್ ಅವರು ವಿಶೇಷ ತಂಡ ಒಂದನ್ನು ರಚಿಸಿದ್ದರು.

ಇನ್ನು ಆರೋಪಿ ಖಾದರ್ ತನ್ವಿರ್ ಪಾಷಾ ಜಾಡು ಹಿಡಿದು ರಾಜ್ಯದ ಬೆಂಗಳೂರಿನ ಆನಂದ ನಗರದಲ್ಲಿ ಆರೋಪಿಯನ್ನು ಚಾಣಾಕ್ಷತನದಿಂದ ಖೆಡ್ಡಾಕ್ಕೆ ಕೆಡವಿ ಕಳ್ಳತನವಾಗಿದ್ದ 14.21 ಗ್ರಾಂ ತೂಕದ ಬಂಗಾರದ ಉಂಗುರದ ಸಮೇತ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

ಈ ಒಂದು ಕಾರ್ಯಾಚರಣೆಯನ್ನು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಇನ್ಸೆಪೆಕ್ಟರ್ ಎಂ. ಎಂ. ತಹಶಿಲ್ದಾರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರವಿರಾಜ ಕೆಂದೂರ್ ಮತ್ತು ಕನಕ ರಾಗಿಣಿ ಆರೋಪಿಯನ್ನು ಬಂಧಿಸಿದ್ದಾರೆ ಇನ್ನು ಇವರ ಕಾರ್ಯವೈಖರಿಯನ್ನು ಮಾನ್ಯ ಪೋಲಿಸ್ ಆಯುಕ್ತರು ಶ್ಲಾಘಿಸಿರುತ್ತಾರೆ.