ಬಂಗಾರದ ಆಶೆಗೆ ದೊಡ್ಡಮನನ್ನೆ ಕೊಲೆ ಮಾಡಿ ಪರಾರಿ ಆದ ಮಗ

70 ವರ್ಷದ ದೊಡ್ಡಮ್ಮ ಕಮಲಮ್ಮನ್ನ ಕೊಲೆ ಮಾಡಿ ಮಗ ಮಾಲತೇಶ್ ಪರಾರಿ ಆದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.
ಕಮಲಮ್ಮನ ಮಲಗಿದ್ದಾಗ ಕಿವಿ ಕಟ್ ಮಾಡಿ ಕಿವಿಯೋಲೆ ದೋಚಿ ಕೊಲೆ ಮಾಡಿ ಪರಾರಿಯಾಗಿರುವ ಮಾಲತೇಶ್…
ಕಳೆದ ಮೂರು ದಿನಗಳ ಹಿಂದೆ ಕಮಲಮ್ಮನ ಮನೆಗೆ ಬಂದಿದ್ದ ಮಾಲತೇಶ.ಇನ್ನು ಮಾಲತೇಶ್ ಕಮಲಮ್ಮನ ಸಹೋದರಿಯ ಮಗನಾಗಿದ್ದು.ಕಳೆದ ಮೂರು ದಿನಗಳಿಂದ ಕಮಲಮ್ಮನ ಮನೆಯಲ್ಲಿದ್ದು ನಿನ್ನೆ ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.
ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಕಮಲಮ್ಮ

ಇಂದು ಮನೆ ಬಾಗಿಲು ತರೆಯದೇ ಇದ್ದಾಗ ಅನುಮಾನ ಬಂದು ಪಕ್ಕದ ಮನೆಯವರು ಬಾಗಿಲು ತಗೆದಾದ ಕೊಲೆಯಾಗಿರೋದು ಬೆಳಕಿಗೆ ಬಂದಿದೆ

ಕೊಲೆ ಮಾಡಿ ಪರಾರಿಯಾಗಿರೋ ಮಾಲತೇಶ
ಕಲಘಟಗಿ ತಾಲೂಕಿನ ಗಂಬ್ಯಾಪೂರ ನಿವಾಸಿಯಾಗಿದ್ದು ಯಾರಿಗು ಅನುಮಾನ ಬರದಂತೆ ಕೊಲೆ ಮಾಡಿ ಪರಾರಿ ಆಗಿದ್ದು .ಬಂಗಾರದ ಆಸೆಗಾಗಿ ಮಾಲತೇಶನೆ ಈ ಕೊಲೆ ಮಾಡಿದ್ದಾನೆ ಅಂತಾ ಮೃತ ಕಮಲಮ್ಮನ ಮಗ ಪ್ರಭಯ್ಯ ಆರೋಪ ಮಾಡಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ಕಸಬಾಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ