Uncategorized

ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಅಕ್ಕಮ್ಮಾ ಕಂಬಳಿ ನೇತೃತ್ವದಲ್ಲಿ ಭಾರತ ಜೋಡೊ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಭಾರತ ಜೋಡೊ ಅಂಗವಾಗಿ ದಸರಾ ಪ್ರಯುಕ್ತ ಹುಬ್ಬಳ್ಳಿಯ ಬಂಕಾಪುರ ಚೌಕ ಹತ್ತಿರ ವಿರುವ ವಾರ್ಡ ನಂಬರ ೭೦ ವಾಳ್ವೇಕರ ಹಕ್ಕಲ ನಲ್ಲಿ ಕಾಂಗ್ರೆಸ್ ನ ಮಹಿಳಾ ಅಧ್ಯಕ್ಷರಾದ ಅಕ್ಕಮ್ಮಾ ಕಂಬಳಿ ಇವರ ನೇತೃತ್ವದಲ್ಲಿ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಮಹಿಳೆಯರಿಗೊಸ್ಕರ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದು
ಮಹಿಳೆಯರು ಅಲ್ಲದೆ ಚಿಕ್ಕ ಬಾಲಕ ಕೂಡಾ ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿ ರಂಗೋಲಿ ಬಿಡಿಸಿದ್ದು ವಿಷೇಶವಾಗಿತ್ತು
ಇನ್ನು ಗುಡಿ ಒಳಗೆ ಭಾರತ ಜೋಡೂ ಯಾತ್ರೆ ಅಂತಾ ರಂಗೋಲಿ ಯಲ್ಲಿ ಬಿಡಿಸಲಾಗಿತ್ತು ಇನ್ನು ಪೂರ್ವ ಕ್ಷೆತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ್ ನವರ ಚಿತ್ರ ಕೂಡ ರಂಗೋಲಿಯಲ್ಲಿ ಕಲಾವಿದ ಸುಂದರವಾಗಿ ಬಿಡಿಸಿದ್ದು ಕಂಡು ಬಂದಿತು ಇನ್ನು ಅಕ್ಕಮ್ಮಾ ಕಂಬಳಿ ಜೊತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ತಮ್ಮ ರಾಷ್ಟ್ರೀಯ ನಾಯಕ ರಾಹುಲ ಗಾಂಧಿ ಕೈಗೊಂಡಿರುವ ಭಾರತ ಯಾತ್ರೆಯು. ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಕಾಂಗ್ರೆಸ್‌ನ ರಾಷ್ಟ್ರೀಯ ನೇತಾರ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆಯು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಬಮ್ಮಗೊಂಡನಹಳ್ಳಿಯಿಂದ ರಾಂಪುರದವರೆಗೆ ನಡೆದ ಯಾತ್ರೆಯಲ್ಲಿ ಹು-ಧಾ ಪೂರ್ಣ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರ ನೇತ್ರತ್ವದಲ್ಲಿ ಬಂಕಾಪುರ ಚೌಕ ಹತ್ತಿರ ವಾರ್ಡ ನಂಬರ ೭೦ ವಾಳ್ವೇಕರ ಹಕ್ಕಲ ಕಾಂಗ್ರೆಸನ ಮಹಿಳಾ ಅಧ್ಯಕ್ಷರಾದ ಅಕ್ಕಮ್ಮಾ ಕಂಬಳಿ ಇವರ ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸನ ಮಹಿಳಾ ಕಾರ್ಯಕರ್ತರು ಪಾಲ್ಗೊಂಡು ಯಾತ್ರೆ ಉದ್ದಕ್ಕೂ ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಗೆ ಹಾಗು ಭಾರತ ಜೋಡೋ ಜಯ ಘೋಷಣೆ ಕೂಗಲಾಯಿತು ಇನ್ನು ಈ ಒಂದು ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರಾದ ರಣದೀಪ ಸುರ್ಜೆವಾಲಾ ಮಾಜಿ ಸಿ.ಎಂ.ಸಿದ್ದರಾಮಯ್ಯ ಕೆ ಪಿ ಸಿ ಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ .ವಿ.ಪ ಸದಸ್ಯರಾದ ಸಲೀಂ ಅಹ್ಮದ ಮಾಜಿ ಶಾಸಕ ಸಂತೋಷ ಲಾಡ. ಸೇರಿದಂತೆ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!