ಲೋಕಾಯುಕ್ತ ಬಲೆಗೆ ಬಿದ್ದ PDO – ಹಣ ತಗೆದುಕೊಳ್ಳುವಾಗ ಟ್ರ್ಯಾಪ್

ಲೋಕಾಯುಕ್ತ ಬಲೆಗೆ PDO ರೊಬ್ಬರು ಬಿದ್ದ ಘಟನೆ ನೆಲಮಂಗಲದಲ್ಲಿ ನಡೆದಿದೆ.ಟಿ.ಬೇಗೂರಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿರುವ ಶೋಭಾರಾಣಿ ಅವರು 15 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಟಿ.ಬೇಗೂರು PDO ಶೋಭಾರಾಣಿ ಅವರು ಜಮೀನಿನ ಖಾತಾ ವಿಚಾರದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬ್ರೋಕರ್ ಮೂಲಕ 15 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾರೆ.ಸಧ್ಯ PDOರನ್ನು ವಶಕ್ಕೆ ತಗೆದುಕೊಂಡಿರುವ ಲೋಕಾ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.