ಕಟ್ಟಡ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳರ ಬಂಧನ

ಹುಬ್ಬಳ್ಳಿಯ ಗ್ರಾಮೀಣ ಭಾಗದಲ್ಲಿ ಯಾರಾದರು ಮನೆ ಕಟ್ಟಲಿಕೆ ಕಬ್ಬಿಣದ ರಾಡುಗಳನ್ನು ತಂದು ಮನೆ ಮುಂದೆ ಹಾಕಿದರೆ ಸಾಕು ರಾತ್ರೋರಾತ್ರಿ ಚಾಲಾಕಿ ಕಳ್ಳರು ಕಳ್ಳತನ ಮಾಡಿ ಪರಾರಿ ಆಗುತ್ತಿದ್ದರು . ಈ ಕುರಿತು ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು.

ಇನ್ನು ಗ್ರಾಮೀಣ ಪೊಲೀಸರು ದೂರು ಆಧರಿಸಿ ತನಿಖೆ ಪ್ರಾರಂಭಿಸಿದಾಗ ಚಾಲಾಕಿ ಕಳ್ಳರು ಕಳ್ಳತನದ ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ .

ಕಳೆದ ರಾತ್ರಿ ಮನೆಯ ಮುಂದೆ ಮನೆ ಮುಂದೆ ಇಟ್ಟಿದ್ದ 85000 ಸಾವಿರ ಮೌಲ್ಯದ ಕಬ್ಬಿಣದ ರಾಡುಗಳನ್ನು ಕಳ್ಳತನ ಮಾಡಿಕೊಂಡು ಸುಮಾರು 5 ಲಕ್ಷ ಬೆಲೆಬಾಳುವ ಟಾಟಾ ಇಂಟ್ರಾ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಗ್ರಾಮೀಣ ಪೊಲೀಸರ ಕೈಗೆ ಆರೋಪಿಗಳಾದ ಮಾರುತಿ ಬಸಪ್ಪ ಹರಣ ಶಿಕಾರಿ ಹಾಗೂ ಪೀರ್ ಸಾಬ್ ಮಾಬುಸಾಬ್ ಕೊಲ್ಕರ್ ಇಬ್ಬರೂ ಕೂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ

ಪೊಲೀಸರು ಇಬ್ಬರು ಕಳ್ಳರನ್ನು ನ್ಯಾಯಾಲಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಈ ಪ್ರಕರಣವನ್ನು ಜಿಲ್ಲಾ ಪೊಲೀಸ ಅಧೀಕ್ಷಕರು ಲೊಕೇಶ ಜಗಲಾಸರ್ ಇವರ ಮಾರ್ಗದರ್ಶನದಲ್ಲಿ .ಗ್ರಾಮೀಣ ಠಾಣೆಯ ಇನ್ಸಪೆಕ್ಟರ ರಮೇಶ ಗೋಕಾಕ ಇವರ ನೇತೃತ್ವದಲ್ಲಿ ಪಿಎಸಐ ಡಿ ಚಾಮುಂಡೇಶ್ವರಿ ಹಾಗು ಎ ಎಸ್ ಐ ಆದ ರಮೇಶ ಬದ್ರಾಪುರ್ ಸಿಬ್ಬಂದಿ ಗಳಾದ ಎನ್ ಎಮ್ ಹೊನ್ನಪ್ಪನವರ. ಮಹಾಂತೇಶ ನಾನಾಗೌಡ್. ಗಿರೀಶ್ ತಿಪ್ಪಣ್ಣವರ. ಡಿ ಎನ್ ನೀಲಮ್ಮನವರ.ನಂದೀಶ ವಡ್ರಾಳಿ. ಪ್ರೇಮನಾಥ ರಾಠೋಡ. ಮಂಜು ಮದುಗಿರಿ . ಸಿ ಬಿ ಜನಗಣ್ಣವರ. ಕಾಂತೇಶ ರೆಡ್ಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಅಧೀಕ್ಷಕರು ಲೊಕೇಶ ಜಗಲಾಸರ ಬಹುಮಾನ ಘೋಷಿಸಿದ್ದಾರೆ.
