ಚಾಲಾಕಿ ಬೈಕ ಕಳ್ಳರ ಬಂಧನ 3 ಲಕ್ಷ ಮೌಲ್ಯದ 9 ಬೈಕ ವಶ

ಛೋಟಾ ಮುಂಬಯಿ ಅಂತಾ ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ಕೆಲಸಕ್ಕೆ ಹೊದ್ರೆ ಸಾಕು ಬೈಕ ಕಳ್ಳರು ತಮ್ಮ ಕೈ ಚಳಕ ತೋರಿಸಿ ಕ್ಷಣಾರ್ಧದಲ್ಲಿ ಬೈಕ ಕಳ್ಳತನ ಮಾಡಿಕೊಂಡು ಪರಾರಿ ಆಗುತ್ತಾರೆ .ಇನ್ನು ಕೆಲವು ದಿನಗಳಿಂದ ಅವಳಿ ನಗರದಲ್ಲಿ ಬೈಕ ಕಳ್ಳರ ಹಾವಳಿ ಹೆಚ್ಚಾಗಿತ್ತು ಪೊಲೀಸರಿಗೆ ತುಂಬಾನೆ ತೆಲೆ ನೋವಾಗಿದ್ದ ಬೈಕ ಕಳ್ಳರನ್ನು ಕೊನೆಗೊ ಬಂಧಿಸಿದ್ದಾರೆ .

ಹುಬ್ಬಳ್ಳಿಯ ಕೇಶ್ವಾಪೂರ ರೈಲ್ವೆ ಯೂನಿಯನ ಆಪೀಸ ಹತ್ತಿರ ಲಾಕ ಮಾಡಿ ನಿಲ್ಲಿಸುವ ಬೈಕಗಳ ಕಳ್ಳತ್ತನ ಹೆಚ್ಚಾಗಿತ್ತು .ಕೇಶ್ವಾಪೂರ ಪೊಲೀಸರು ಕೆಲವು ದಿನಗಳಿಂದ ನಂಬರ ಪ್ಲೆಟ ಇಲ್ಲದ ಸಂಶಯಾಸ್ಪದವಾಗಿ ತಿರುಗುತ್ತಿರುವ ವಾಹನಗಳ ತಪಾಸಣೆ ಮಾಡುವಾಗ ಅಲ್ಲಿ ಸಿಕ್ಕ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಇವರು ಬೈಕಳಗನ್ನು ಕಳ್ಳತನ ಮಾಡುತ್ತಿರುವುದಾಗಿ ತಿಳಿದು ಕಳ್ಳತನ ಮಾಡಿದ್ದ 9 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಕಳ್ಳರು ಎಷ್ಟು ಚಾಲಾಕಿ ಅಂದ್ರೆ ಕೇವಲ ಹಳೆಯ ಬೈಕುಗಳನ್ನು ಅಷ್ಟೇ ಕಳ್ಳತನ ಮಾಡುತ್ತಿದ್ದರು. ಹಳೆಯ ಬೈಕುಗಳ ಡಾಕುಮೆಂಟ ಸರಿಯಾಗಿ ಇರುವುದಿಲ್ಲಾ ಕಳ್ಳತನ ಮಾಡಿದ್ರೆ ವಾಹನಗಳ ಮಾಲಿಕರು ಪೊಲೀಸರಿಗೆ ದೂರು ನಿಡುವುದಿಲ್ಲಾ ಅಂತಾ ಹಳೆಯ ಬೈಕುಗಳನ್ನು ಕಳ್ಳತನಮಾಡುವುದು ಅಲ್ಲದೆ ಮತ್ತು ಕದ್ದ ಬೈಕುಗಳ ಮೇಲೆ ರೈಲ್ವೆಯ ಇಲಾಖೆಯಿಂದ ಕಳ್ಳತನಮಾಡಿದಂತಾ ಕಬ್ಬಿಣದ ವಸ್ತುಗಳನ್ನು ಸಾಗಾಟ ಮಾಡಲುಈ ಬೈಕುಗಳನ್ನು ಬಳಸುತ್ತಿದ್ದರು.ಇನ್ನು ಸುಮಾರು ಮೂರು ಲಕ್ಷ ಮೌಲ್ಯದ 9 ಬೈಕುಗಳನ್ನು ವಶ ಪಡಿಸಿಕೊಂಡು ಆರೋಪಿಗಳನ್ನು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಒಂದು ಕಾರ್ಯಾಚರಣೆ ಯನ್ನು ಪೊಲೀಸ ಆಯುಕ್ತರಾದ ಲಾಬೂರಾಮ . ಡಿಸಿಪಿ ಗಳಾದ ಸಾಹೀಲ ಬಾಗ್ಲಾ.ಗೋಪಾಲ ಬ್ಯಾಕೋಡ. ಎಸಿಪಿ ವಿನೋದ ಮುಕ್ತೆದಾರ ಇವರ ಮಾರ್ಗದರ್ಶನ ದಲ್ಲಿ ಕೇಶ್ವಾಪೂರ ಠಾಣೆಯ ಇನ್ಸಪೆಕ್ಟರ ಜಗದೀಶ್ ಹಂಚಿನಾಳ ಇವರ ನೇತೃತ್ವದಲ್ಲಿ ಪಿಎಸಐ ಸದಾಶಿವ ಕಾನಟ್ಟಿ. ಕೆ ವಿ ಚಂದಾವರಕರ.ಆರ್ ಎನ್ ಗುಡದರಿ. ಜೊತೆಯಲ್ಲಿ ಸಿಬ್ಬಂದಿಗಳಾದ ಎಂ ಡಿ ಕಾಲವಾಡ. ಕೃಷ್ಣಾ ಕಟ್ಟಿಮನಿ. ಆನಂದ ಪುಜಾರ. ವಿಠಲ ಮಾದರ. ಎಸ್ ಎಸ್ ಕರೆಯಂಕಣ್ಣವರ. ಎಪ್ ಎಸ್ ರಾಗಿ. ಸಿ ಕೆ ಲಮಾಣಿ. ಹೆಚ ಆರ್ ರಾಮಾಪುರ. ಎಮ್ ಆರ್ ಬಾಳಿಗಿಡದ. ಸುನೀಲ ಪೂಜಾರಿ. ಮಹಾಲಿಂಗ ಬಾಳಿಗಿಡದ. ಎಪ ಎಚ್ ನಧಾಪ. ಇವರ ಕಾರ್ಯಕ್ಕೆ ಮೆಚ್ಚಿ ಪೊಲೀಸ ಆಯುಕ್ತಕರು ಬಹುಮಾನ ಘೋಷಿಸಿದ್ದಾರೆ.
