ಹುಬ್ಬಳ್ಳಿಯಲ್ಲಿ ಮಗನಿಂದ ತಂದೆಯ ಕೊಲೆ. ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು

ಧಾರವಾಡದಲ್ಲಿ ಮಗನಿಂದ ತಾಯಿಯ ಹತ್ಯೆ ಮಾಸುವ ಮುನ್ನವೆ ಮತ್ತೊಂದು ಮಗನಿಂದ ವೃದ ತಂದೆಯ ಹತ್ಯೆ ನಡೆದಿದೆ .

ಹುಬ್ಬಳ್ಳಿಯ ಅಂಚಟಗೇರಿಯಲ್ಲಿ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ೨೨ ವಯಸ್ಸಿನ ಮೈಲಾರಿ ಎಂಬ ಯುವಕ ತನ್ನ ತಂದೆಯನ್ನು ಬ್ರಿಜ್ ಮೇಲಿಂದ ಕೆಳಗೆ ನೂಕಿ ಕೊಲೆ ಮಾಡಿ ಪಾರಾರಿ ಆಗಿದ್ದಾನೆ. ಇನ್ನು ಕೊಲೆಯಾದ ವೃದ ೬೫ ವಯಸ್ಸಿನ ಸಿದ್ದಪ್ಪಾ ಬರಮಣ್ಣನವರ ಎಂದು ತಿಳಿದು ಬಂದಿದೆ.
ಇನ್ನು ಸುದ್ದಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು ಮೃತ ವ್ಯೆಕ್ತಿಯ ಶವವನ್ನು ಕಿಂಸನ ಶವಾಗಾರಕ್ಕೆ ರವಾನಿಸಿದ್ದು ತನಿಖೆ ಪ್ರಾರಂಭಿಸಿದ್ದಾರೆ